ದೇವನಹಳ್ಳಿ: ನಾವು ಇಂಡಿಯಾ ಅಂತ ಮಾಡಿರೋದು ರಾಷ್ಟವನ್ನು ಒಗ್ಗೂಡಿಸುವ ದೃಷ್ಟಿಯಿಂದ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯವರು ಮಾಡುತ್ತಿರುವ ಕೋಮುಗಲಭೆ, ದುರಾಡಳಿತದ ವಿರುದ್ಧ ಜಾತ್ಯತೀತ ಪಕ್ಷಗಳು ಒಂದಾಗಲಿವೆ, 2024 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜಾತ್ಯಾತೀತ ಪಕ್ಷಗಳು ಒಂದಾಗಿ ಅಧಿಕಾರಕ್ಕೆ ಬರಲಿವೆ. ಬಿಜೆಪಿಯನ್ನು ಹೊರಗಿಟ್ಟು ಅಧಿಕಾರಕ್ಕೆ ಬರುತ್ತೇವೆ , ರೈತರಿಗೆ, ಕಾರ್ಮಿಕರಿಗೆ, ಬಡವರಿಗೆ, ಅಲ್ಪಸಂಖ್ಯಾತರಿಗೆ ಒಳ್ಳೆಯ ಆಡಳಿತವನ್ನು ಕೊಡುತ್ತೇವೆ ಎಂದು ತಿಳಿಸಿದರು.
ಇಂಡಿಯಾ ಬದಲಾಗಿ ಭಾರತ್ ಹೆಸರು ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ,ಅದು ಬಿಜೆಪಿ ತೀರ್ಮಾನ, ಅವರು ಸರ್ಕಾರ ನಡೆಸುತ್ತಿದ್ದಾರೆ , ಅವರಿಗೆ ಮೆಜಾರಿಟಿ ಇದೆ, ಇನ್ನೂ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಮಾತನಾಡಿ, ಏನಾದರೂ ತಾಂತ್ರಿಕ ಕಾರಣಗಳಿಂದ ಆಗಿರಬಹುದಷ್ಟೇ. ಯಾವುದೇ ಕಾರಣಕ್ಕೂ ನಿಲ್ಲಿಸುವಂತಹ ಪ್ರಶ್ನೆಯೇ ಇಲ್ಲ ಎಂದರು.
ಇದನ್ನೂ ಓದಿ : ‘ಉದಯನಿಧಿ ‘ಜನಾಂಗೀಯ ಹತ್ಯೆ’ ಪದ ಬಳಸಿಲ್ಲ, ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸ್ತಿದೆ’
ಈಗಾಗಲೇ ಸಾಕಷ್ಟು ಹಣ ಬಿಡುಗಡೆಯಾಗಿದೆ, ಸುಮಾರು 34 ಸಾವಿರ ಕೋಟಿ ಗೃಹಲಕ್ಷ್ಮೀಗೆ ಖರ್ಚಾಗಲಿದೆ, ಅದಕ್ಕೂ ತಯಾರಾಗಿದ್ದೇವೆ, ಅನ್ನಭಾಗ್ಯ ಯೋಜನೆಗೆ 10 ಸಾವಿರ ಕೋಟಿ ಆಗಲಿದೆ ಅದಕ್ಕೂ ತಯಾರಿದ್ದೇವೆ . ಈಗಾಗಲೇ ಅನ್ನ ಭಾಗ್ಯದ ಹಣ ಸಂದಾಯವಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.