ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ವಿಧಾನಸಭಾ ಕ್ಷೇತ್ರವಾದ ಮಂಚೇನಹಳ್ಳಿ ಕೇಂದ್ರಕ್ಕೆ 10 ಕೋಟಿ ರೂ. ಅನುದಾನವನ್ನು ಕಂದಾಯ ಸಚಿವ ಆರ್. ಅಶೋಕ್ ಘೋಷಣೆ ಮಾಡಿದ್ದಾರೆ.
ಜಿಲ್ಲೆಯ ಜರಬಂಡಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸಚಿವ ಆರ್. ಅಶೋಕ್ ಮಾತನಾಡಿ, 79 ಎ.ಬಿ ನಿಯಮ ತೆಗೆದು ಹಾಕಿದ್ದೇನೆ. ಅಧಿಕಾರಿಗಳು 79 ಎ, ಬಿ ಇಟ್ಟುಕೊಂಡು ಕಿರುಕುಳ ಕೊಡುತ್ತಿದ್ದರು. 94ಸಿ ಅಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ನೊಂದಣಿ ಮಾಡಲಾಗಿದೆ ಎಂದರು.
ಸಚಿವ ಸುಧಾಕರ್ ಮಾತನಾಡಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕ್ಲಿನಿಕ್ ಆರಂಭವಾಗಿದೆ. ಮಹಿಳೆಯರಿಗೆ ಇತ್ತಿಚಿಗೆ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ. ಆರಂಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸಂಪೂರ್ಣ ಗುಣಮುಖರಾಗಬಹುದು.
ಮೊಬೈಲ್ ಕ್ಲಿನಿಕ್ನಲ್ಲಿ ಲ್ಯಾಬ್ ಔಷಧಿ ಚಿಕಿತ್ಸೆ ಲಭ್ಯವಿದೆ. ಸೂಕ್ತ ಚಿಕಿತ್ಸೆ ಸಿಗದೆ ನನ್ನ ತಾಯಿ ಶಾಂತಾ ಮೃತಪಟ್ಟಿದ್ದರು. ಸದ್ಯ ತಾಯಿ ಹೆಸರಿನಲ್ಲಿ ಈಗ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಹೇಳಿದರು. ಇನ್ನು ಜರಬಂಡಹಳ್ಳಿ ಗ್ರಾಮದಲ್ಲಿ ಹೋಬಳಿ ಹಾಗೂ ಪಂಚಾಯತಿವಾರು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಫೌಂಡೇಷನ್ನಿಂದ ವೈಯಕ್ತಿಕ ಮೊಬೈಲ್ ಕ್ಲಿನಿಕ್ ಆರಂಭ ಮಾಡಲಾಯಿತು.