ನವದೆಹಲಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಸಂಸ್ಥಾಪಕ ನಂದಮೂರಿ ತಾರಕ ರಾಮರಾವ್ ಅವರ ಚಿತ್ರವನ್ನು ಒಳಗೊಂಡ ಸ್ಮರಣಾರ್ಥ ರೂ.100 ಬೆಳ್ಳಿ ನಾಣ್ಯವನ್ನು ಪರಿಚಯಿಸಲಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮ. ಈ ವಿಶೇಷ ಕಾರ್ಯಕ್ರಮದಲ್ಲಿ ಎನ್‌ಟಿಆರ್ ಕುಟುಂಬಸ್ಥರು ಸಹ ಭಾಗಿಯಾಗಿದ್ದರು.
ಈ ನಾಣ್ಯವು 44 ಮಿ.ಮೀ ಸುತ್ತಳತೆ ಹೊಂದಿದೆ. ಶೇ.50ರಷ್ಟು ಬೆಳ್ಳಿ, ಶೇ.40ರಷ್ಟು ತಾಮ್ರ, ಶೇ.5ರಷ್ಟು ನಿಕಲ್ ಮತ್ತು 5 ಪ್ರತಿಶತ ಸತು ಸೇರಿದೆ. ನಾಣ್ಯದಲ್ಲಿ ಮೂರು ಸಿಂಹಗಳು ಮತ್ತು ಒಂದು ಬದಿಯಲ್ಲಿ ಅಶೋಕ ಚಕ್ರವನ್ನು ಮತ್ತು ಇನ್ನೊಂದು ಬದಿಯಲ್ಲಿ ಎನ್‌ಟಿಆರ್ ಅವರ ಚಿತ್ರವಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್; ನಾಳೆ ಬಿಜೆಪಿಯಿಂದ ಚಾರ್ಜ್‌ಶೀಟ್ ರಿಲೀಸ್!
ಎನ್‌ಟಿಆರ್ 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ತೆಲುವು ಚಿತ್ರರಂಗದ ದಿಗ್ಗಜ ನಟರು ಎನಿಸಿಕೊಂಡಿದ್ದರು. ತೆಲುಗು ಸಾಂಸ್ಕೃತಿಕ ಪುನರುಜ್ಜೀವನ ಮತ್ತು ತೆಲುಗು ಭಾಷಾ ಚಳವಳಿಯ ಪ್ರವರ್ತಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇದರ ಜೊತೆ ರಾಜಕೀಯಕ್ಕಿಳಿದಿದ್ದ ಅವರು, ಮೂರು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಒಂದು ನಂದಿ ಪ್ರಶಸ್ತಿ ಮತ್ತು ಒಂದು ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳ ಪಡೆದಿದ್ದರು. 1968ರಲ್ಲಿ ಪದ್ಮಶ್ರೀ ಗೌರವಕ್ಕೂ ಪಾತ್ರರಾಗಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.