ತುಮಕೂರು : ಕ್ಷೀರಭಾಗ್ಯ ಯೋಜನೆಗೆ 10 ವರ್ಷ ತುಂಬಿರುವ ಹಿನ್ನೆಲೆ ಮಧುಗಿರಿಯಲ್ಲಿ ಸಂಭ್ರಮಾಚರಣೆಗೆ ತೀರ್ಮಾನಿಸಲಾಗಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲನೆಯದಾಗಿ ಅಧ್ಯಕ್ಷರು ಭೀಮನಾಯ್ಕ್ ಅವರಿಗೆ ಧನ್ಯವಾದಗಳು ತಿಳಿಸ್ತೀನಿ, ಕ್ಷೀರಭಾಗ್ಯ ನಮ್ಮ ಸಿಎಂ ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗ ಜಾರಿಯಾಗಿದ್ದು ಎಂದರು.
1 ರಿಂದ 10 ನೇ ತರಗತಿ ಮಕ್ಕಳಿಗೆ ಅನುಕೂಲವಾಗುವ ಕಾರ್ಯಕ್ರಮದಲ್ಲಿ 10 ವರ್ಷದ ಸಂಭ್ರಮವನ್ನ ಆಚರಣೆ ಮಾಡಲು ತೀರ್ಮಾನ ಮಾಡಿದ್ದಾರೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಹಲವು ಸಚಿವರು ಬರ್ತಾ ಇದ್ದಾರೆ, ಸರ್ಕಾರ ಜನಪರವಾಗಿ ನಡೆಯುತ್ತಿದ್ದೇವೆ ಎಂದು ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡಿರೋದು ಎಂದು ತಿಳಿಸಿದರು.
ಇದನ್ನೂ ಓದಿ: ಹೆಚ್‌ಡಿಕೆ ಆರೋಗ್ಯ ವಿಚಾರಿಸಿದ ಶೆಟ್ಟರ್
ಈ ಕಾರ್ಯಕ್ರಮದಲ್ಲಿ ಸುಮಾರು 156 ಕೋಟಿ ರೂ. ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸ್ತಾರೆ, ಐದು ಗ್ಯಾರಂಟಿಗಳಿಗೆ ವಿರೋಧ ಪಕ್ಷದವರು ಟೀಕೆ ಮಾಡಿದ್ರು, ಆದ್ರೆ ಇವತ್ತು ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದು ಎಲ್ಲ ಯೋಜನೆಗೆ ಜಾರಿಗೆ ಯತ್ನಿಸುತ್ತಿದ್ದಾರೆ ಎಂದರು.
ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನ ಅನುಷ್ಠಾನ ಮಾಡಿದೆ, ನಮ್ಮ ಜಿಲ್ಲೆಯಲ್ಲಿ ಪ್ರತಿ ಕಾರ್ಯಕ್ರಮ ಯಶಸ್ವಿಯಾಗಿದೆ, ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ನೆರವಾಗಿದೆ ಎಂದು ವಿವರಿಸಿದರು.
ಶಕ್ತಿ ಯೋಜನೆ ಮೂರು ತಿಂಗಳಲ್ಲಿ 1.5 ಕೋಟಿ ಜನ ತುಮಕೂರು ಜಿಲ್ಲೆಯಲ್ಲಿ ಓಡಾಡಿದ್ದಾರೆ, ಅನ್ನಭಾಗ್ಯ ಯೋಜನೆ ಕೇಂದ್ರದಲ್ಲಿ ಸಾಕಷ್ಟು ಅಕ್ಕಿ ಇದ್ರು ಕೊಡಲಿಲ್ಲ, ನಾವು ಕೊಟ್ಟ ಮಾತು ಉಳಿಸಿಕೊಳ್ಳೋಕೆ ಅಕ್ಕಿ ಸಿಗುವವರೆಗೆ 5 ಕೆಜಿ ಅಕ್ಕಿಗೆ ಹಣ ಕೊಡ್ತಾ ಇದ್ದೇವೆ ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ಮುಂಗಾರು ಫೇಲ್ ಆಗಿದೆ, ದಾವಣಗೆರೆಯಿಂದ ತುಮಕೂರು, ಕೋಲಾರ, ಚಿತ್ರದುರ್ಗ ಈ ಭಾಗಕ್ಕೆ ಹೆಚ್ಚು ಮಳೆ ಫೈಲ್ಯೂರ್ ಆಗಿದೆ, ನಮ್ಮ ಜಿಲ್ಲೆಯಲ್ಲಿ 98% ಮಳೆ ಫೈಲ್ಯೂರ್ ಆಗಿದೆ, ಸರ್ಕಾರಕ್ಕೆ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ಹೇಳಿದ್ದೆ, ನಾನು ಸಿಎಂ ಅವರಿಗೆ ಪತ್ರ ಬರೆದಿದ್ದೇನೆ, ಇವತ್ತು ಸಂಪುಟದ ಉಪಸಮಿತಿಯಲ್ಲಿ ಈ ವಿಷಯ ಬರುತ್ತೆ, ಉಪಸಮಿತಿಯಲ್ಲಿ ರಾಜಣ್ಣ ಸದಸ್ಯರಿದ್ದಾರೆ ಅವರಿಗೂ ಮನವಿ ಮಾಡ್ತೀವಿ, ನಮ್ಮ ಜಿಲ್ಲೆಯ ಹೆಚ್ಚು ತಾಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡಬೇಕು ಅಂತಾ ಒತ್ತಾಯಿಸುತ್ತೇನೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.