Wednesday, November 29, 2023
spot_img
- Advertisement -spot_img

ಬೆಣ್ಣೆಹಳ್ಳ ಕಾಮಗಾರಿಗೆ ₹1,375 ಕೋಟಿ ಹಣ : ಕೋನರೆಡ್ಡಿ

ಧಾರವಾಡ : ಬೆಣ್ಣೆಹಳ್ಳದ ಕಾಮಗಾರಿಗೆ ₹ 1375 ಕೋಟಿ ಹಣ ತೆಗೆದಿಡಲಾಗಿದ್ದು, 143 km ಉದ್ದ ಕಾಮಗಾರಿ ಶೀಘ್ರವೇ ಆಗಲಿದೆ ಎಂದು ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವಲಗುಂದ ತಾಲೂಕಿನ ಬೆಣ್ಣೆಹಳ್ಳದ ಶಾಶ್ವತ ಕಾಮಗಾರಿಗೆ ₹ 1375 ಕೋಟಿ ಹಣವನ್ನು ತೆಗೆದಿಡಲಾಗಿದೆ, 2 ಹಂತದಲ್ಲಿ ಕಾಮಗಾರಿ ನಡೆಯಲಿದೆ, ಮೊದಲ ಹಂತದಲ್ಲಿ ₹ 530 ಕೋಟಿ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

143 ಕಿ.ಮೀ ಉದ್ದ ಕಾಮಗಾರಿ ಶೀಘ್ರವೇ ಆಗಲಿದ್ದು, ಶಿಗ್ಗಾಂವಿ ತಾಲೂಕಿನ ದುಂಡಸಿ, ಹುಬ್ಬಳ್ಳಿ ತಾಲೂಕಿನ ಕೆಲವು ಹಳ್ಳಿಗಳು, ನರಗುಂದ ಹಾಗೂ ನವಲಗುಂದ ತಾಲೂಕಿನ ಹಳ್ಳಿಗಳು ಬೆಣ್ಣೆ ಹಳ್ಳದ ಕಾಮಗಾರಿ ವ್ಯಾಪ್ತಿಗೆ ಬರುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಮನವಿ; ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸ್ಟಾಲಿನ್

ರಾಜ್ಯದಲ್ಲಿ ಬರಗಾಲ ದೊಡ್ಡ ದುರಂತವಾಗಿದೆ, NDRF ಹಾಗೂ SDRF ತಂಡಗಳ ನಾರ್ಮ್ಸ್ ಬರಪೀಡಿತ ತಾಲೂಕು ಘೋಷಣೆ ಮಾಡಲು ತೊಂದರೆ ಆಗಿದೆ, ಇದಕ್ಕಾಗಿ ಕೇಂದ್ರದ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇವೆ, ನವಲಗುಂದ ತಾಲೂಕಿನ ಅಣ್ಣಿಗೇರಿ ಹೊಸ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಲ್ಲ ಎಂದು ಹರಿಹಾಯ್ದರು.

ಅಣ್ಣಿಗೇರಿ ತಾಲೂಕನ್ನು ಬರಪೀಡಿತ ತಾಲೂಕು ಘೋಷಣೆ ಮಾಡಲು ಉಪ ಸಂಪುಟ ಸಮಿತಿಗೆ ಮನವಿ ಮಾಡಿರುವೆ. ಸಿಎಂ ಹಾಗೂ ಕಂದಾಯ ಸಚಿವರು ಸ್ಪಂದನೆ ಮಾಡಿದ್ದಾರೆ ಮಲಪ್ರಭಾ ಬಲದಂಡೆ ಕಾಲುವೆಯನ್ನು ಆಧುನಿಕರ ಮಾಡಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles