Wednesday, May 31, 2023
spot_img
- Advertisement -spot_img

ನಾಳೆ ಮತ ಎಣಿಕೆ : ಅಹಿತಕರ ಘಟನೆ ನಡೆಯದಂತೆ ಕ್ರಮ

ಬೆಂಗಳೂರು : ವಿಧಾನಸಭಾ ಚುನಾವಣೆ 2023 ರ ಮತ ಎಣಿಕೆ ನಾಳೆ ನಡೆಯಲಿದ್ದು, ಬೆಂಗಳೂರು ನಗರದ 4 ಹಾಗೂ ಬೆಂಗಳೂರು ಜಿಲ್ಲೆಯ 5 ಮತ ಎಣಿಕೆ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಎಣಿಕೆ ದಿನದಂದು ಯಾವುದೇ ತೊಂದರೆ ಅಹಿತಕರ ಘಟನೆ ನಡೆಯದಂತೆ ಬೆಳಿಗ್ಗೆ 6 ಘಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ, ಅಷ್ಟೇ ಅಲ್ಲದೇ ಬೆಳಗ್ಗೆ ಸಶಸ್ತ್ರ ದಳವನ್ನು ಸನ್ನದ್ಧ ಸ್ಥಿತಿಯಲ್ಲಿರುವಂತೆ ಕ್ರಮವಹಿಸಲಾಗಿದೆ ಜೊತೆಗೆ ಆಯಾ ಸರಹದ್ದಿನಲ್ಲಿ ವಿಶೇಷ ಗಸ್ತು ನೇಮಿಸಲಾಗಿದ್ದು, ಪ್ರತಿಯೊಂದು ವಿಭಾಗದ ಉಸ್ತುವಾರಿಗೆ ಒಬ್ಬರು ಎಸಿಪಿ ನಿಯೋಜಿಸಲಾಗಿದೆ.

ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮೇ 8 ರಿಂದ 10ರ ವರೆಗೂ 3 ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್‌ ಹಾಕಿದೆ.ಮತ ಎಣಿಕೆ ಕಾರ್ಯವು ಆಯಾ ಜಿಲ್ಲಾ, ತಾಲೂಕಿನ ನಿಗದಿತ ಕೇಂದ್ರಗಳಲ್ಲಿ ನಡೆಯಲಿದ್ದು, ಬಹುತೇಕ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ, ಮತ ಎಣಿಕೆ ಸಮಯದಲ್ಲಿ ಸಮಾಜಘಾತುಕ ವ್ಯಕ್ತಿಗಳು, ಕಿಡಿಗೇಡಿಗಳು ಗೆದ್ದ ಹಾಗು ಸೋತ ಅಭ್ಯರ್ಥಿಗಳ ಪರವಾಗಿ ಪ್ರತಿಭಟನೆ ಮಾಡುವ ಸಾಧ್ಯತೆ ಹಿನ್ನಲೆ ಬೆಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿಮಾಡಿ ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ.

Related Articles

- Advertisement -

Latest Articles