Monday, March 20, 2023
spot_img
- Advertisement -spot_img

157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ

ನವದೆಹಲಿ: ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ವ ನೀಡಲಾಗಿದ್ದು, 157 ಹೊಸ ನರ್ಸಿಂಗ್ ಕಾಲೇಜು ಗಳ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದರು.

ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರ ಕ್ಕೂ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಓದುವ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಸಾಂಕ್ರಾಮಿಕ ಸಮಯದ ಕಲಿಕೆಯ ನಷ್ಟ ಸರಿದೂಗಿಸಲು, ರಾಷ್ಟ್ರೀಯ ಪುಸ್ತಕ ಟ್ರಸ್ಟ್, ಮಕ್ಕಳ ಪುಸ್ತಕ ಟ್ರಸ್ಟ್ ಮತ್ತು ಇತರ ಮೂಲಗಳಿಗೆ ಈ ಭೌತಿಕ ಗ್ರಂಥಾಲಯಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಒದಗಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪಿಸಲಾಗುವುದು. ಈ ಗ್ರಂಥಾಲಯಗಳಲ್ಲಿ ಭೌಗೋಳಿಕತೆ, ಭಾಷೆಗಳ ಪ್ರಕಾರ ಆಧರಿಸಿ ಗುಣಮಟ್ಟದ ಪುಸ್ತಕ ಲಭ್ಯವಿರಲಿವೆ. ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲ ಪ್ರವೇಶಿಸಲು ಪಂಚಾಯತ್ ಮತ್ತು ಎಲ್ಲಾ ಹಂತಗಳಲ್ಲಿ ಭೌತಿಕ ಗ್ರಂಥಾಲಯ ಸ್ಥಾಪಿಸಿ ಮೂಲ ಸೌಕರ್ಯ ಒದಗಿಸುವಂತೆ ರಾಜ್ಯಗಳನ್ನು ಒತ್ತಾಯಿಸಲಾಗುವುದು.

ಇದ್ರ ಜೊತೆಗೆ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಅನ್ನು ಪ್ರಾರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಹೆಚ್ಚಿಸಲು ಯುವಕರಿಗೆ ವಿವಿಧ ರಾಜ್ಯಗಳಲ್ಲಿ 30 ಸ್ಕಿಲ್ ಇಂಡಿಯಾ ಅಂತರರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ನೆರವು ನೀಡುವ ಪ್ಯಾಕೇಜ್ ನ್ನು ಪ್ರಧಾನಮಂತ್ರಿ ವಿಶ್ವ ಕರ್ಮ ಕೌಶಲ್ ಸಮ್ಮಾನ್ ಎಂಬ ಪರಿಕಲ್ಪನೆಯೊಂದಿಗೆ ಮಾಡಲಾಗಿದೆ.

ಇದು ಎಂಎಸ್‌ಎಂಇ ಮೌಲ್ಯ ಸರಪಳಿಯೊಂದಿಗೆ ಸಂಯೋಜಿಸುವ ಮೂಲಕ ಅವರ ಉತ್ಪನ್ನಗಳ ಗುಣಮಟ್ಟ, ಪ್ರಮಾಣ ಮತ್ತು ತಲುಪುವಿಕೆಯನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ಹಾಗೂ ಕರಾವಳಿಯುದ್ದಕ್ಕೂ ಮ್ಯಾಂಗ್ರೋವ್ ಕಾಡುಗಳನ್ನು ಬೆಳಸಲು ಸರ್ಕಾರ ಪ್ರೋತ್ಸಾಹ, ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ‘ಗ್ರೀನ್‌ ಕ್ರೆಡಿಟ್‌’ ಎಂಬ ಕಾರ್ಯಕ್ರಮ ಜಾರಿಗೆ ತರಲಾಗುತ್ತದೆ.

Related Articles

- Advertisement -

Latest Articles