Wednesday, March 22, 2023
spot_img
- Advertisement -spot_img

ಪ್ರಧಾನಿ, ರಾಷ್ಟ್ರಪತಿ ಸೇರಿ ಹೊಸ ವರ್ಷಕ್ಕೆ ಶುಭ ಕೋರಿದ ರಾಜಕೀಯ ಗಣ್ಯರು

ನವದೆಹಲಿ : 2023 ನೇ ಹೊಸ ವರ್ಷಕ್ಕೆ ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಗಣ್ಯರು ಶುಭಾಶಯ ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್‌ ಮಾಡಿ, ದೇಶದ ಎಲ್ಲಾ ನಾಗರಿಕರು ಮತ್ತು ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಹೊಸ ವರ್ಷದ ಶುಭಾಶಯಗಳು. 2023 ರ ವರ್ಷವು ನಮ್ಮ ಜೀವನದಲ್ಲಿ ಹೊಸ ಸ್ಫೂರ್ತಿ, ಗುರಿ ಮತ್ತು ಸಾಧನೆಗಳನ್ನು ತರಲಿ. ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಅಂತರ್ಗತ ಅಭಿವೃದ್ಧಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಸಂಕಲ್ಪ ಮಾಡೋಣ’ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ‘2023 ಆಶಾದಾಯಕವಾಗಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಪ್ರತಿ ಬೀದಿ, ಹಳ್ಳಿ ಮತ್ತು ಪ್ರತಿ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ 2023 ರ ಹೊಸ ವರ್ಷದ ಶುಭ ಕಾಮನೆಗಳು. ಈ ವರ್ಷ ಹೊಸ ಭರವಸೆ, ಸಂತೋಷ ಮತ್ತು ಬಹಳಷ್ಟು ಯಶಸ್ಸನ್ನು ತಂದುಕೊಡಲಿ. ಪ್ರತಿಯೊಬ್ಬರಿಗೂ ದೇವರು ಉತ್ತಮ ಆರೋಗ್ಯ ಕರುಣಿಸುವಂತೆ ಆಶೀರ್ವದಿಸಲಿ’ ಎಂದು ಹಾರೈಸಿದ್ದಾರೆ.

ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ನಾಡಿನ ಸಮಸ್ತ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2023ನೇ ವರ್ಷ ಕರ್ನಾಟಕದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಹಾಗೂ ಕನ್ನಡಿಗರ ಸ್ವಾಭಿಮಾನದ ಕಹಳೆ ಮೊಳಗಲಿದೆ. ಎಲ್ಲಾ ಕನ್ನಡಿಗರಿಗೂ ಹೊಸ ವರ್ಷದಲ್ಲಿ ಒಳ್ಳೆಯದಾಗಲಿ ಹಾಗೂ ನಾಡಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

Related Articles

- Advertisement -

Latest Articles