ನವದೆಹಲಿ: ನಾಳೆ ಮುಂಬೈನಲ್ಲಿ ಮೈತ್ರಿಕೂಟ ಸಭೆ ನಡೆಸಲು ನಿರ್ಧರಿಸಿದೆ. ಈ ನಡುವೆ ಎನ್‌ಡಿಎ ಒಕ್ಕೂಟ ಸಹ ಸಭೆಗೆ ಮುಂದಾಗಿದೆ. ಇದಕ್ಕೂ ಮೊದಲು ಬಿಜೆಪಿ ಇಂದು ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅಭಿನಯದ ‘ಟರ್ಮಿನೇಟರ್’ ಹಾಲಿವುಡ್ ಸಿನಿಮಾದ ಕಾಲ್ಪನಿಕ ಸೈಬಾರ್ಗ್ ಪಾತ್ರ ಬಿಂಬಿಸುವ ಪೋಸ್ಟರ್ ಹಂಚಿಕೊಂಡಿದೆ.
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ಹೋರಾಟ ನಡೆಸುವ ಪ್ರತಿಪಕ್ಷಗಳ ಪ್ರಯತ್ನಕ್ಕೆ ಟಾಂಗ್ ಕೊಟ್ಟಿರುವ ಬಿಜೆಪಿ ‘2024! ನಾನು ಹಿಂತಿರುಗುತ್ತೇನೆ!’ ಎಂದು ಪೋಸ್ಟ್ ಮಾಡಿದೆ. “ಪ್ರಧಾನಿ ಮೋದಿಯನ್ನು ಸೋಲಿಸಬಹುದು ಎಂದು ಪ್ರತಿಪಕ್ಷಗಳು ಭಾವಿಸುತ್ತವೆ. ಕನಸು ಕಾಣುತ್ತಿರಿ! ಟರ್ಮಿನೇಟರ್ ಯಾವಾಗಲೂ ಗೆಲ್ಲುತ್ತಾನೆ ಎಂದು ಟಾಂಗ್ ಕೊಟ್ಟಿದೆ.
ಇದನ್ನೂ ಓದಿ: ‘ಕೇಜ್ರಿವಾಲ್ ಮುಂದಿನ ಪ್ರಧಾನಿ ಅಭ್ಯರ್ಥಿ’; ಮೈತ್ರಿಕೂಟ ಸಭೆಗೂ ಮುನ್ನ ಶಾಕ್ ಕೊಟ್ಟ ಆಪ್!
2024ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಬಾಕಿ ಉಳಿದಿರುವಾಗ ಪ್ರತಿಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ. I.N.D.I.A ಬಣವು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಸಭೆ ನಡೆಸುತ್ತಿದೆ. ಇತ್ತ ಬಿಜೆಪಿ ಸಹ ಸಭೆ ನಿಗದಿ ಮಾಡಿದೆ. I.N.D.I.A ಒಕ್ಕೂಟದ ಎಲ್ಲಾ 26 ಪಕ್ಷಗಳು ಈ ಸಭೆಯಲ್ಲಿ ಭಾಗಿಯಾಗುತ್ತಿದ್ದು, ಸೋನಿಯಾ ಗಾಂಧಿ, ರಾಹುಲ್, ಖರ್ಗೆ ಸೇರಿ ಹಲವು ಪ್ರಮುಖ ಪಕ್ಷಗಳ ನಾಯಕರು ಭಾಗಿಯಾಗುತ್ತಿದ್ದಾರೆ. ಈ ವೇಳೆ ಸಭೆಯಲ್ಲಿ ಮೈತ್ರಿಕೂಟದ ನೂತನ ಲೋಗೋ ರಿವೀಲ್ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಎನ್‌ಡಿಎ’ ವಿರುದ್ಧ ತೊಡೆ ತಟ್ಟಲು ಸಿದ್ದವಾದ ‘ಇಂಡಿಯಾ’ ಪಡೆ, 3ನೇ ಸಭೆಗೆ ಶಿವಸೇನೆ ನೇತೃತ್ವ
ಇತ್ತ ಎನ್‌ಡಿಎ ಮೈತ್ರಿಕೂಟ ಸೇರಿರುವ ಮಹಾರಾಷ್ಟ್ರ ಸರ್ಕಾರದ ಬಣವೂ ಸಹ ಸಭೆ ಕರೆದಿದ್ದು, ಭಾರೀ ಕುತೂಹಲ ಮೂಡಿಸಿದೆ. ಮುಂಬರುವ ಲೋಕಸಭೆ ಚುನಾವಣೆ ಕುರಿತ ಚರ್ಚೆಗಳು ಮೊದಲು ಮುಂಬೈನಲ್ಲಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧಿಕೃತ ನಿವಾಸದಲ್ಲಿ ಈ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಸೇರಿ ಹಲವರು ಭಾಗಿಯಾಗುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.