ನವದೆಹಲಿ: ಬ್ಯಾಂಕ್ನಲ್ಲಿ ಠೇವಣಿ ಇರಿಸಿ ಬಡ್ಡಿಯ ಆಧಾರದ ಮೇಲೆ ಜೀವನ ಸಾಗಿಸುವ ಹಿರಿಯ ನಾಗರಿಕರಿಗೆ ಕೇಂದ್ರ ಬಜೆಟ್ ಸಿಹಿ ಸುದ್ದಿ ನೀಡಿದೆ.
ಠೇವಣಿ ಇಟ್ಟು ಪ್ರತೀ ತಿಂಗಳೂ ಬಡ್ಡಿಯನ್ನು ಆದಾಯದ ರೂಪದಲ್ಲಿ ಪಡೆಯುವ ಹಿರಿಯ ನಾಗರಿಕರಿಗೆ ಈ ಹಿಂದೆ 4.5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಒಂದು ಖಾತೆಯಲ್ಲಿ ಠೇವಣಿ ಇರಿಸಲು ಸಾಧ್ಯ ಆಗುತ್ತಿರಲಿಲ್ಲ. ಇದೀಗ ಆ ಮಿತಿಯನ್ನು 9 ಲಕ್ಷಕ್ಕೆ ಏರಿಸಲಾಗಿದೆ. ಇನ್ನು ಜಂಟಿ ಖಾತೆಗಳಿಗೆ ಈ ಮಿತಿಯನ್ನು 15 ಲಕ್ಷಕ್ಕೆ ಏರಿಸಲಾಗಿದೆ.
2023ನೇ ವರ್ಷದ ಕೇಂದ್ರ ಬಜೆಟ್‌ನಲ್ಲಿ ಹಿರಿಯ ನಾಗರಿಕರ ಠೇವಣಿ ಮಿತಿಯನ್ನು 15 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಮೊತ್ತವನ್ನು ಠೇವಣಿ ಇರಿಸಲು ಬಯಸುವ ಹಿರಿಯ ನಾಗರಿಕರಿಗೆ ಅನೇಕ ಖಾತೆಗಳನ್ನು ನಿರ್ವಹಿಸುವ ಕೆಲಸ ತಪ್ಪಲಿದೆ.
ಠೇವಣಿ ಇಟ್ಟ ಮೊತ್ತಕ್ಕೆ ಗರಿಷ್ಟ ಬಡ್ಡಿಯೂ ಲಭಿಸಿದಂತೆ ಆಗುತ್ತದೆ. ಇನ್ನೂ ಬಜೆಟ್ ನಲ್ಲಿ ರೈಲ್ವೆಯ ಬಂಡವಾಳದ ವೆಚ್ಚವನ್ನು 2.40 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ರೈಲ್ವೆಗೆ 2013-2014ರಲ್ಲಿ ಒದಗಿಸಿದ ಮೊತ್ತಕ್ಕಿಂತ ಒಂಬತ್ತು ಪಟ್ಟು ಬಂಡವಾಳ ತೊಡಗಿಸಲಾಗಿದೆ ಎಂದು ಹೇಳಿದರು.
ಹೆಚ್ಚಿದ ಪ್ರಯಾಣಿಕರ ನಿರೀಕ್ಷೆಯೊಂದಿಗೆ, ರಾಜಧಾನಿ, ಶತಾಬ್ದಿ, ಡುರೊಂಟೊ, ಹಮ್ಸಾಫರ್ ಮತ್ತು ತೇಜಸ್‌ನಂತಹ ಪ್ರೀಮಿಯರ್ ರೈಲುಗಳ 1,000 ಕ್ಕೂ ಹೆಚ್ಚು ಬೋಗಿಗಳನ್ನು ನವೀಕರಿಸಲು ರೈಲ್ವೆ ಯೋಜಿಸುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ರೈಲ್ವೆಯು ಇನ್ನೂ 100 ವಿಸ್ಟಾಡೋಮ್ ಕೋಚ್‌ಗಳನ್ನು ತಯಾರಿಸಲು ಮುಂದಾಗಿದೆ.
ಕಲ್ಲಿದ್ದಲು, ರಸಗೊಬ್ಬರ ಮತ್ತು ಆಹಾರ ಧಾನ್ಯ ಕ್ಷೇತ್ರಗಳಿಗೆ ಕೊನೆಯ ಮತ್ತು ಮೊದಲ ಮೈಲಿ ಸಂಪರ್ಕಕ್ಕಾಗಿ 100 ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಲಾಗಿದೆ. 2022-23ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ 1.4 ಲಕ್ಷ ಕೋಟಿ ರೂ ಮೀಸಲಿಡಲಾಗಿದೆ.