ತುಮಕೂರು : ಬಿಜೆಪಿ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಬಿ.ಸಿ.ಪಾಟೀಲ್ ಅವರಿಗೆ 3% ಕಮೀಷನ್ ಹೋಗುತ್ತಿತ್ತು. ತೋಟಗಾರಿಕೆ ಇಲಾಖೆಯಿಂದ ಬಿಜೆಪಿಯಲ್ಲಿ 18% ಕಮಿಷನ್ ಇತ್ತು, ಈಗ 30% ಏರಿಕೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯ ತುರುವೇಕೆರೆಯಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಮಿಷನ್ ವಿಚಾರವನ್ನು ಗುತ್ತಿಗೆದಾರರು ಮಾಧ್ಯಮಗಳ ಮುಂದೆ ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ. ಅವರನ್ನು ನಾನು ಕರೆದಿರಲಿಲ್ಲ ನಮ್ಮ ಮನೆ ಬಳಿ ಬಂದು ಯಾವ ರೇಟ್ ಎಂದು ಅವರಾಗಿಯೇ ನನಗೆ ಮಾಹಿತಿ ನೀಡಿದ್ದರು ಎಂದರು.
ಇದನ್ನೂ ಓದಿ : ಜಾಗತಿಕ ನಾಯಕರು ಭಾರತಕ್ಕೆ ಬರುವಾಗ ವಿದೇಶಕ್ಕೆ ಹೊರಟ ರಾಹುಲ್
ಅವರು ಹೇಳುವುದನ್ನೆಲ್ಲ ಹೇಳಿ ಆಮೇಲೆ ಕೈಕಾಲು ಹಿಡಿದು ತಪ್ಪಾಗಿದೆ ಎನ್ನುತ್ತಾರೆ. ನಾವೇ ಏನು ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ನಮ್ಮನ್ನು ಅವರು ನಗೆಪಾಟಲಿಗೆ ಗುರಿ ಮಾಡುತಿದ್ದಾರೆ ಎಂದು ಗುತ್ತಿಗೆದಾರರ ವಿರುದ್ಧ ಗರಂ ಆಗಿದ್ದಾರೆ.
ಬಿಜೆಪಿ ಅವರು ತಪ್ಪು ಮಾಡಿಕೊಂಡಿದ್ದಾರೆ ಅದಕ್ಕೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿಲ್ಲ. ನಾವು ಸತ್ಯದಿಂದ ಬದುಕಿದ್ದೇವೆ, ಅಕ್ರಮ ಇದ್ದರೆ ತನಿಖೆ ಮಾಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ದೇವೇಗೌಡರು ನೀನೊಬ್ಬನೇ ಓಡಾಡುವುದನ್ನು ನನ್ನಿಂದ ನೋಡಲು ಆಗುತ್ತಿಲ್ಲ. ನಾನು ನಿನ್ನ ಜೊತೆ ಬರುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ಈಗ 91ವರ್ಷ ವಯಸ್ಸಾಗಿದೆ. ರಾಜಕೀಯದಲ್ಲಿ ಒಳ್ಳೆಯತನ ಉಪಯೋಗಕ್ಕೆ ಬಾರದು. ಅವರೆಲ್ಲ ಸಂಪತ್ತನ್ನು ಲೂಟಿ ಮಾಡಲು ಅಧಿಕಾರ ಹಿಡಿದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ನಾವು ವಿರೋಧ ಪಕ್ಷದಲ್ಲಿ ಇದ್ದು ಅಕ್ರಮಗಳನ್ನು ಹೇಳಬಾರದಾ..? ಹೇಳದಿದ್ದರೆ ಆ ಸ್ಥಾನದಲ್ಲಿ ಕೂರಲು ನನಗೆ ಯೋಗ್ಯತೆ ಇದ್ಯಾ..? ನಾನು ಅವರ ಜೊತೆ ಅಡ್ಜಸ್ಟ್ ಆಗಿ ಪಾಲು ತೆಗೆದುಕೊಂಡು ಸುಮ್ಮನಾಗಲಾ..? ಎಂದು ಕೈ ನಾಯಕರ ವಿರುದ್ಧ ಅಬ್ಬರಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.