ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರ ರಾಂಚಿ ಭೇಟಿ ವೇಳೆ ಭದ್ರತಾ ಲೋಪವೆಸಗಿದ್ದಗಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಭಗವಾನ್ ಬಿರ್ಸಾ ಮುಂಡಾ ಮೆಮೋರಿಯಲ್ ಪಾರ್ಕ್-ಕಮ್-ಫ್ರೀಡಂ ಫೈಟರ್ ಮ್ಯೂಸಿಯಂಗೆ ತೆರಳುತ್ತಿದ್ದಾಗ ಮಹಿಳೆಯೊಬ್ಬರು ಅನಿರೀಕ್ಷಿತವಾಗಿ ಓಡಿ ಪ್ರಧಾನಿಯವರ ಬೆಂಗಾವಲು ಪಡೆಯ ಮುಂದೆ ಬಂದು ನಿಂತರು. ಹೀಗಾಗಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆದಾಗ್ಯೂ, ಮಹಿಳೆಯನ್ನು ತಕ್ಷಣವೇ ಪ್ರಧಾನಿಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಹಿಡಿದು ಕಸ್ಟಡಿಗೆ ತೆಗೆದುಕೊಂಡರು.
ಇದನ್ನೂ ಓದಿ: ವಾಹನ ಸವಾರರಿಗೆ ಸಿಹಿ ಸುದ್ದಿ: HSRP ನಂಬರ್ ಪ್ಲೇಟ್ ನೊಂದಣಿಗೆ ಅವಧಿ ವಿಸ್ತರಣೆ
ಬುಡಕಟ್ಟು ಜನಾಂಗದ ಐಕಾನ್ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜಾರ್ಖಂಡ್‌ಗೆ ಎರಡು ದಿನಗಳ ಭೇಟಿ ನೀಡಿದ್ದರು.
‘ಪ್ರಧಾನಿ ಭೇಟಿ ವೇಳೆ ಕರ್ತವ್ಯಲೋಪ ಎಸಗಿದ ಒಬ್ಬ ಎಎಸ್‌ಐ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ’ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಅಮಾನತುಗೊಂಡ ಪೊಲೀಸರಲ್ಲಿ ಎಎಸ್‌ಐ ಅಬು ಜಾಫರ್, ಕಾನ್‌ಸ್ಟೆಬಲ್ ಚೋಟೇಲಾಲ್ ತುಡು ಮತ್ತು ಕಾನ್‌ಸ್ಟೆಬಲ್ ರಂಜನ್ ಕುಮಾರ್ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಭದ್ರತೆಯನ್ನು ಉಲ್ಲಂಘಿಸುವ ಸಂದರ್ಭದಲ್ಲಿ ಸಿಕ್ಕಿಬಿದ್ದ ಮಹಿಳೆಯನ್ನು ಸಂಗೀತಾ ಝಾ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಪತಿಯೊಂದಿಗೆ ಅಸಮಾಧಾನಗೊಂಡಿದ್ದು, ಆತನ ವಿರುದ್ಧ ದೂರು ದಾಖಲಿಸಲು ಬಯಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ರಾಜ್ಯ ರಾಜಧಾನಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಪಡೆದು ರಾಂಚಿಗೆ ಬಂದಿದ್ದೇನೆ ಎಂದು ಝಾ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಡಿ.4 ರಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ
ಮಂಗಳವಾರ 10 ಕಿಮೀ ರೋಡ್ ಶೋ ನಡೆಸಿದ ಪ್ರಧಾನಿ, ಮರುದಿನ ಬೆಳಗ್ಗೆ ರಾಂಚಿಯ ಜೈಲ್ ಚೌಕ್ ಬಳಿಯ ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಪಾರ್ಕ್ ಕಮ್ ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯದಲ್ಲಿರುವ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.