ಹೈದರಾಬಾದ್: ರಾಜ್ಯದಲ್ಲಿ ಪೇಸಿಎಂ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಅಭಿಯಾನ ಭಾರೀ ಯಶಸ್ಸು ಪಡೆದಿತ್ತು. ಇದೇ ರೀತಿ ತೆಲಂಗಾಣದಲ್ಲೂ ಕಾಂಗ್ರೆಸ್ ಹೊಸ ಅಭಿಯಾನ ಆರಂಭಿಸಿದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್ ‘ಬುಕ್ ಮೈ ಸಿಎಂ’ ಅಭಿಯಾನ ಆರಂಭಿಸಿದೆ. ಹೈದರಾಬಾದ್‌ನ ಬೀದಿ ಬೀದಿಗಳಲ್ಲಿ ಸಿಎಂ ಕೆಸಿಆರ್ ಇರುವ ಪೋಸ್ಟರ್‌ಗಳ ಅಂಟಿಸಲಾಗಿದೆ.
ಇದನ್ನೂ ಓದಿ: Nehru to Modi : ಹಳೆಯ ಸಂಸತ್ ಭವನದ ನೆನಪುಗಳನ್ನು ಮೆಲುಕು ಹಾಕಿದ ಪ್ರಧಾನಿ
ಕ್ಯೂ ಆರ್ ಕೋಡ್ ಇರುವ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, 30 ಪರ್ಸೆಂಟ್ ಕಮಿಷನ್ ಆರೋಪ ಮಾಡಲಾಗಿದೆ. ತೆಲಂಗಾಣದಲ್ಲಿ ಕೆಲ ತಿಂಗಳಲ್ಲೇ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದ್ದು, ಕೆಸಿಆರ್ ಅಧಿಕಾರದಿಂದ ಇಳಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ಇದಕ್ಕಾಗಿ ಕಾಂಗ್ರೆಸ್ 6 ಗ್ಯಾರಂಟಿಗಳ ಘೋಷಣೆ ಮಾಡಿದೆ.
ಕರ್ನಾಟಕದಂತೆ ಅಲ್ಲಿಯೂ ಸಹ ಗ್ಯಾರಂಟಿ ಕಾರ್ಡ್‌ಗಳ ಹಂಚಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ. ಮಹಿಳೆಯರಿಗೆ 2,500 ಸಹಾಯಧನ, 500 ರೂಪಾಯಿಗೆ ಅಡುಗೆ ಅನಿಲ, ಮಹಿಳೆಯರಿಗೆ ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ ಹಾಗೂ 200 ಯುನಿಟ್ ಉಚಿತ್ ವಿದ್ಯುತ್ ಸೇರಿದಂತೆ ಹಲವು ಭರವಸೆ ನೀಡಿದೆ.
ಇದನ್ನೂ ಓದಿ: ‘ವಿಶೇಷ ಅಧಿವೇಶನ ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿಯಾಗಲಿದೆ’
ಈ ಮೊದಲು ಮಧ್ಯ ಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಾಂಗ್ರೆಸ್ ಹೊಸ ಅಭಿಯಾನ ಆರಂಭಿಸಿತ್ತು. ಯೂತ್ ಕಾಂಗ್ರೆಸ್ ಚೌಹಾಣ್ ಅವರ ವ್ಯಂಗ್ಯಚಿತ್ರಗಳೊಂದಿಗೆ ಪೋಸ್ಟರ್‌ಗಳನ್ನು ಹಂಚಿಕೊಂಡಿತ್ತು ಮತ್ತು ‘ಮಮಾಟೋ 50% ಕಮಿಷನ್ ತನ್ನಿ, ಹಗರಣಗಳ ಉಚಿತವಾಗಿ ಮನೆಗೆ ತಲುಪಿಸಿ’ ಎಂಬ ಅಭಿಯಾನ ಆರಂಭಿಸಿ ಭಾರೀ ಸದ್ದು ಮಾಡಿತ್ತು.
‘ಭ್ರಷ್ಟಾಚಾರ? ಹಗರಣಗಳು? ಮಮಾಟೋಗೆ ಲಾಗಿನ್ ಮಾಡಿ ಮತ್ತು 50% ಕಮಿಷನ್ ಪಡೆಯಿರಿ! ಹಗರಣಗಳ ಉಚಿತ ಹೋಮ್ ಡೆಲಿವರಿ. ಉಚಿತ!! ಉಚಿತ!!’ ಎಂದು ಸಿಎಂ ಶಿವರಾಜ್ ಸಿಂಗ್ ಔಹಾಣ್ ವಿರುದ್ಧ ಅಭಿಯಾನ ನಡೆಸಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.