Friday, September 29, 2023
spot_img
- Advertisement -spot_img

ನಾಳೆಯಿಂದ 5 ದಿನಗಳ ಸಂಸತ್ ವಿಶೇಷ ಅಧಿವೇಶನ; ಹಲವು ಮಸೂದೆಗೆ ಬೀಳಲಿದೆ ಅಂಕಿತ!

ನವದೆಹಲಿ: ನಾಳೆಯಿಂದ 5 ದಿನಗಳ ಕಾಲ ವಿಶೇಷ ಅಧಿವೇಶನ ಆರಂಭಗೊಳ್ಳುತ್ತಿದೆ. ದಿಢೀರ್ ಅಧಿವೇಶನ ಕರೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಂಬರುವ ಲೋಕಸಭೆ ಚುನಾವನೆಗೂ ಮುನ್ನ ನಡೆಯಲಿರುವ ಕೊನೆ ಅಧಿವೇಶನ ಇದಾಗಿರಲಿದ್ದು, ಹೀಗಾಗಿ ಕುತೂಹಲಕ್ಕೆ ಕಾರಣವಾಗಿದೆ.

ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳೆದ್ದಿವೆ.

ಇದನ್ನೂ ಓದಿ: ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ; ಫ್ರೀ ಕರೆಂಟು, ₹500ಕ್ಕೆ LPG, ಮಹಾಲಕ್ಷ್ಮಿಗೆ ₹2,500…

ನಾಲ್ಕು ಮಸೂದೆಗಳ ಚರ್ಚೆ

ವಕೀಲರ (ತಿದ್ದುಪಡಿ) ಮಸೂದೆ, ನಿಯತಕಾಲಿಕೆಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ, ಅಂಚೆ ಕಚೇರಿ ಬಿಲ್‌, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆಗಳ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ.

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ ನೇಮಕಾತಿ ನಿಯಂತ್ರಿಸುವ ಹೊಸ ಮಸೂದೆ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದ್ದು, ಈ ಮಸೂದೆಯ ಪ್ರಕಾರ ಚುನಾವಣಾ ಆಯುಕ್ತರನ್ನು ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಇದರ ಜೊತೆಗೆ ಈ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡುವ ಆಲೋಚನೆ ಇದೆ.

ಇದನ್ನೂ ಓದಿ: ‘2024ರಲ್ಲಿ ಬಿಜೆಪಿಯ ಅಧಿಕಾರದಿಂದ ಹೊರಗಿಡುವುದೇ ಗಾಂಧೀಜಿಗೆ ನೀಡುವ ನಿಜವಾದ ಗೌರವ’

ಇದಲ್ಲದೆ ನಾಳೆಯಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಎಲ್ಲಾ ಐದು ದಿನಗಳು ಸಂಸತ್ತಿನಲ್ಲಿ ಸಕಾರಾತ್ಮಕವಾಗಿ ಹಾಜರಿರಬೇಕು ಎಂದು ಬಿಜೆಪಿ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles