ಬೆಂಗಳೂರು: ಎಲೆಕ್ಷನ್ ಸನಿಹದಲ್ಲಿರುವಾಗ 5 ನಾಯಕರು ಗುಡ್‍ಬೈ ಹೇಳಿದ್ದಾರೆ. ಕಡೂರಿನ ವೈಎಸ್‍ವಿ ದತ್ತಾ, ಕೋಲಾರದ ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್, ಅರಕಲಗೂಡು ಎಟಿ ರಾಮಸ್ವಾಮಿ, ಅರಸೀಕೆರೆಯ ಶಿವಲಿಂಗೇಗೌಡ ಜೆಡಿಎಸ್‍ಗೆ ವಿದಾಯ ಹೇಳಿದ್ದಾರೆ.
ಐವರು ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆಯಿದೆ. ಬಹಳಷ್ಟು ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಈಗಾಗಲೇ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ದಾರೆ. ಪಕ್ಷ ಸೇರಿದ ನಂತರ ಮಾತನಾಡಿ, ನಾನು ಕಾಂಗ್ರೆಸ್ ಲ್ಲಿ ಇದ್ದವನು. ಮಾನಸಿಕವಾಗಿ ನನಗೆ ಬಿಜೆಪಿ ಒಗ್ಗಲ್ಲ. ಅವರ ಸಿದ್ದಾಂತಕ್ಕೂ ನನಗೂ ಅಜಗಜಾಂತರ ಇದೆ. ನಾನು ಜಾತ್ಯತೀತ ನಿಲುವಿನಿಂದ ಬಂದಿದ್ದೇನೆ. ಅವರ ಅಜೆಂಡಾ ನನಗೆ ಇಷ್ಟ ಆಗಲ್ಲ. ಅದಕ್ಕೆ ನಾನು ಕಾಂಗ್ರೆಸ್ ಗೆ ಹೋಗುತ್ತಿದ್ದೇನೆ ಎಂದು ಗುಬ್ಬಿ ಶ್ರೀನಿವಾಸ್ ಹೇಳಿದ್ದರು.
ಅರಸೀಕೆರೆಯ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಅರಸೀಕೆರೆಯ ಶಿವಲಿಂಗೇಗೌಡ ಕಳೆದ 1 ವರ್ಷದಿಂದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರಲಿಲ್ಲ. ಶಿವಲಿಂಗೇಗೌಡ ಜೆಡಿಎಸ್ ತೊರೆದಿದ್ದಾರೆ.
ಮಾಜಿ ಶಾಸಕ ವೈ.ಎಸ್.ವಿ ದತ್ತಾರವರು ಕಾಂಗ್ರೆಸ್ ಸೇರಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಆಯನೂರು ಮಂಜುನಾಥ್ ಮತ್ತು ಆರ್.ಶಂಕರ್‌ರವರು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಇಂದು ವಿಧಾನಸಭೆ ಕಾರ್ಯದರ್ಶಿಗಳಿಗೆ ಎಟಿ ರಾಮಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನೂ ಬಿಜೆಪಿ ತೊರೆಯುವವರ ಸಂಖ್ಯೆ ಹೆಚ್ಚುತ್ತಿದ್ದು, ಬಿಜೆಪಿ ಶಾಸಕ ಎನ್.ವೈ ಗೋಪಾಲಕೃಷ್ಣ ರಾಜೀನಾಮೆ ಸಲ್ಲಿಸಿದ್ದಾರೆ.