ಮೈಸೂರು: ಪ್ರಾಜೆಕ್ಟ್ ಟೈಗರ್‌ನ 50ನೇ ವರ್ಷಾಚರಣೆ ಪ್ರಯುಕ್ತ ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಮೂರು ದಿನಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹುಲಿ ಅಂದಾಜು ಸಂಖ್ಯೆಯ ಘೋಷಣೆ, ಹುಲಿ ಸಂರಕ್ಷಿತ ಪ್ರದೇಶದ ಪರಿಣಾಮಕಾರಿ ಮೌಲ್ಯಮಾಪನ ವರದಿ ಬಿಡುಗಡೆ ಮತ್ತು ಹುಲಿ ಸಂರಕ್ಷಣೆಗಾಗಿ ‘ಅಮೃತ್ ಕಲ್ ಕಾ ವಿಷನ್’ ಮತ್ತು ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
“ಪ್ರಾಜೆಕ್ಟ್ ಟೈಗರ್‌ನ 50 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪ್ರಮುಖ ಆಚರಣೆಯನ್ನು ಆಯೋಜಿಸಿದೆ. 2023ರ ಏಪ್ರಿಲ್ 1ರಂದು ಪ್ರಾಜೆಕ್ಟ್ ಟೈಗರ್ 50 ವರ್ಷಗಳನ್ನು ಪೂರ್ಣಗೊಳಿಸಲಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ 7 ಬಾರಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮುಂದಿನ ತಿಂಗಳು ಮತ್ತೆ ಮೈಸೂರಿಗೆ ಆಗಮಿಸಲಿದ್ದಾರೆ. ಇಂದು ಮೋದಿ ಕರ್ನಾಟಕದ ಚಿಕ್ಕಬಳ್ಳಾಪುರ, ದಾವಣಗೆರೆಗೆ ಭೇಟಿ ಕೊಟ್ಟಿದ್ದು, ನಾನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.