ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ಯೂ ರಿಸರ್ಚ್ ಸೆಂಟರ್‌ನ (Pew Research Centre) ಇತ್ತೀಚಿನ ಸಮೀಕ್ಷೆಯ ಪ್ರಕಾರ, ಹತ್ತರಲ್ಲಿ ಎಂಟು ಮಂದಿ ಭಾರತೀಯರು ಪ್ರಧಾನಿಯ ಬಗ್ಗೆ ಪ್ರಶಂಸೆಯ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದು ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಭಾರತದ ಹೆಸರು ಪ್ರಜ್ವಲಿಸುತ್ತಿದೆ ಎಂದು ಸರಿಸುಮಾರು 10ರಲ್ಲಿ 7 ಮಂದಿ ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: ‘ಎಲ್‌ಪಿಜಿ ದರ ಇಳಿಕೆ ‘ರೇವಡಿ ಸಂಸ್ಕೃತಿ’ಯಲ್ಲವೇ?’; ಕಪಿಲ್ ಸಿಬಲ್
ಶೇ.55 ರಷ್ಟು ಭಾರತೀಯರು 2014 ರಿಂದ ದೇಶವನ್ನು ಮುನ್ನಡೆಸುತ್ತಿರುವ ಮತ್ತು ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ 3ನೇ ಬಾರಿಗೆ ಸ್ಪರ್ಧಿಸಲು ಬಯಸುತ್ತಿರುವ ಪ್ರಧಾನಿ ಮೋದಿಯವರ ಕುರಿತು ಧನಾತ್ಮಕ ಅಭಿಪ್ರಾಯ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಜೊತೆಗೆ ಶೇ.79ರಷ್ಟು ಮಂದಿ ಮೋದಿ ಆಡಳಿತ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಕೇವಲ ಐದನೇ ಒಂದು ಭಾಗದಷ್ಟು ಭಾರತೀಯರು ಮಾತ್ರ ಪ್ರಧಾನಿ ಮೋದಿ ಕುರಿತು ಋಣಾತ್ಮಕ ಭಾವನೆ ಹೊಂದಿದ್ದಾರೆ. ಸುಮಾರು ಶೇ.68 ರಷ್ಟು ಭಾರತೀಯರು ಇತ್ತೀಚಿನ ವರ್ಷಗಳಲ್ಲಿ ಭಾರತ ವಿಶ್ವದ ಎದುರು ಬಲಗೊಳ್ಳುತ್ತಿದೆ ಎಂದು ನಂಬುತ್ತಾರೆ ಎಂದಿದೆ.
ಇದನ್ನೂ ಓದಿ: ‘2024ಕ್ಕೆ ನಾನು ಹಿಂತಿರುಗುತ್ತೇನೆ’; ಬಿಜೆಪಿ ‘ಟರ್ಮಿನೇಟರ್’ ಪೋಸ್ಟ್ ವೈರಲ್!
2023ರ ಫೆಬ್ರವರಿ 20 ಮತ್ತು ಮೇ 22ರ ನಡುವೆ ಭಾರತ ಸೇರಿದಂತೆ 24 ದೇಶಗಳಲ್ಲಿ 30,861 ಜನರನ್ನು ಈ ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಪ್ಯೂ ರಿಸರ್ಚ್ ಸಂಸ್ಥೆ ತಿಳಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.