Thursday, September 28, 2023
spot_img
- Advertisement -spot_img

ಐತಿಹಾಸಿಕ ಸ್ಮಾರಕವಾದ ಹಳೆ ಸಂಸತ್‌ ಕಟ್ಟಡ

ನವದೆಹಲಿ: 96 ವರ್ಷ ಹಳೆಯ ಸಂಸತ್ ಭವನ ಐತಿಹಾಸಿಕ ಸ್ಮಾರಕದ ಸಾಲಿಗೆ ಸೇರಲಿದೆ. ಸಂಸತ್ತಿನ ವಿಶೇಷ ಅಧಿವೇಶನ ಆಗಸ್ಟ್ 19ರಂದು ಹೊಸ ಕಟ್ಟಡದಲ್ಲಿ ಆರಂಭವಾಗುವುದರೊಂದಿಗೆ ಭಾರತೀಯ ಪ್ರಜಾಪ್ರಭುತ್ವದ ಪಯಣದ ಅಮೂಲ್ಯ ಭಂಡಾರವಾಗಿದ್ದ ಈ ಸಂಸತ್‌ ಭವನವನ್ನು 1927 ಜನವರಿ 18 ರಂದು ಅಂದಿನ ವೈಸ್​ರಾಯ್ ಲಾರ್ಡ್ ಇರ್ವಿನ್ ಉದ್ಘಾಟಿಸಿದ್ದರು.

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರಖ್ಯಾತ ‘ಟ್ರಿಸ್ಟ್ ವಿದ್ ಡೆಸ್ಟಿನಿ’ ಭಾಷಣ ಮಾಡಿದ್ದು ಇದೇ ಕಟ್ಟಡದಲ್ಲಿ ಮಾಡಿದ್ದರು.

ಸರ್ ಹರ್ಬರ್ಟ್ ಬೇಕರ್ ಮತ್ತು ಸರ್ ಎಡ್ವಿನ್ ಲ್ಯುಟೆನ್ಸ್ ಈ ಕಟ್ಟಡದ ವಿನ್ಯಾಸವನ್ನು ರೂಪಿಸಿದ್ದರು. ಲಾರ್ಡ್ ಇರ್ವಿನ್ ಚಿನ್ನದ ಬೀಗದ ಕೈ ಬಳಸಿ ಕೌನ್ಸಿಲ್ ಹೌಸ್ ದ್ವಾರವನ್ನು ತೆರೆದಿದ್ದರು ಎಂದು ‘ನ್ಯೂ ಡೆಲ್ಲಿ: ಮೇಕಿಂಗ್ ಆಫ್ ಎ ಕ್ಯಾಪಿಟಲ್’ ಕೃತಿಯಲ್ಲಿ ದಾಖಲಾಗಿದೆ. ಮಾಲವಿಕಾ ಸಿಂಗ್ ಮತ್ತು ರುದ್ರಾಂಗ್ಶು ಮುಖರ್ಜಿ ಕೃತಿಯ ಲೇಖಕರು.

ಅಂದಿನ ಬ್ರಿಟಿಷ್ ವೈಸ್ ರಾಯ್ ಲಾರ್ಡ್ ಇರ್ವಿನ್ ಜನವರಿ 18, 1927ರಲ್ಲಿ ಉದ್ಘಾಟಿಸಿದ ಪ್ರಜಾಪ್ರಭುತ್ವದ ಹೆಗ್ಗುರುತಾದ ಈ ಸಂಸತ್ ಭವನ. ವಸಾಹತುಶಾಹಿ ಆಡಳಿತ, ಎರಡನೇ ವಿಶ್ವ ಯುದ್ಧ, ಸ್ವತಂತ್ರ ಭಾರತ, ಸಂವಿಧಾನದ ಅನುಷ್ಠಾನ ಹಾಗೂ ಹಲವಾರು ಹೆಗ್ಗುರುತಿನಂಥ ಶಾಸನಗಳಿಂದ ಹಿಡಿದು ವಿವಾದಾತ್ಮಕ ಕಾನೂನುಗಳವರೆಗಿನ ಅನುಮೋದನೆವರೆಗೆ ಸಾಕ್ಷಿಯಾಗಿದೆ.

ಇತಿಹಾಸಕಾರರು ಹಾಗೂ ಸಂರಕ್ಷಣಾ ವಾಸ್ತು ತಜ್ಞರು, ಹಳೆಯ ಸಂಸತ್ ಭವನವನ್ನು “ಭಾರತದ ಚರಿತ್ರೆಯ ಭಂಡಾರ” ಎಂದು ಬಣ್ಣಿಸಿದ್ದು, ಅದರ ಪ್ರಜಾಸತ್ತಾತ್ಮಕ ಪ್ರತಿಧ್ವನಿಗಳನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಅದನ್ನು ದಿಲ್ಲಿಯ ವಾಸ್ತುಶಿಲ್ಪದ ಆಭರಣ ಎಂದು ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ: ಪಾಕ್ ಮಾಜಿ ಸಿಎಂ ಇಮ್ರಾನ್ ಖಾನ್ ಪಕ್ಷದ ಹಾಡು ಕದ್ದ ಕಾಂಗ್ರೆಸ್; ಬಿಜೆಪಿ ಆರೋಪ

ಹೊಸ ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಇದು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಸಭಾಂಗಣ, ಸಂಸದರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಕಮಿಟಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿರುತ್ತದೆ.

ಸುಮಾರು ಆರು ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ವಿಸ್ತಾರವಾದ ಕಟ್ಟಡವು ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾದ ಸಂಸತ್ತಿನ ಕಟ್ಟಡಗಳಲ್ಲಿ ಒಂದಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles