ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಮಳೆ ಇಲ್ಲದೆ ರೈತರು ಬಿತ್ತನೆ ಮಾಡಿದ್ದ ರಾಗಿ, ಅವರೆ, ಮೆಕ್ಕೆ ಜೋಳದ ಜತೆಗೆ ಜಾನುವಾರುಗಳ ಮೇವಿನ ಬೆಳೆಯೂ ನಾಶವಾಗಿದ್ದು, ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಈಗಾಗಲೇ ಹಲವು ತಾಲೂಕುಗಳನ್ನು ಬರಗಾಲ ಪಿಡಿತ ಪ್ರದೇಶ ಎಂದು ಘೋಷಿಸಿರುವ ಸರ್ಕಾರ, ಗುಡಿಬಂಡೆ ತಾಲೂಕನ್ನು ಮಾತ್ರ ಕೈಬಿಟ್ಟಿರುವುದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ವಿವಿಧ ತಾಲೂಕುಗಳನ್ನು ಬರಗಾಲ ಪಿಡಿತ ಪ್ರದೇಶ ಅಂತ ಘೋಷಣೆ ಮಾಡಿ ಗುಡಿಬಂಡೆ ತಾಲೂಕನ್ನು ಮಾತ್ರ ಕೈ ಬಿಟ್ಟಿದ್ದಾರೆ. ಮಳೆಯಿಲ್ಲದೆ ಜಾನುವಾರುಗಳಿಗೆ ಮೇವಿಲ್ಲದೆ ತೊಂದರೆಯಾಗಿದೆ. ರೈತರ ಹೊಲಗಳಲ್ಲಿ ಬೆಳೆಗಳು ಬತ್ತಿ ಹೋಗಿವೆ ಎಂದು ಜನರು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಇದನ್ನೂ ಓದಿ; ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಅವರೂ ಧ್ವನಿ ಎತ್ತಲಿ: ಶೋಭಾ ಕರಂದ್ಲಾಜೆಗೆ ಡಿಕೆಶಿ ತಿರುಗೇಟು
‘ಅಧಿಕಾರಿಗಳು ಮತ್ತು ಸರ್ಕಾರ ಗುಡಿಬಂಡೆ ತಾಲೂಕನ್ನು ಯಾಕೆ ಬರಗಾಲ ಪೀಡಿತ ಎಂದು ಘೋಷಿಸಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡದೆ ಬಿಟ್ಟಿರುವುದು ಖಂಡನೀಯ. ಕೂಡಲೆ ಸರ್ಕಾರ ಗುಡಿಬಂಡೆ ತಾಲೂಕನ್ನು ಬರಗಾಲಪಿಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು’ ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.