ಕೊಪ್ಪಳ: ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಭಾವಚಿತ್ರವನ್ನಿಟ್ಟು ಪೂಜೆ ಮಾಡಿದ್ದಾನೆ. ಅಲ್ಲದೇ 2023ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಪೂಜೆ ಸಲ್ಲಿಸಿರುವುದಾಗಿ ಹೆಚ್ಡಿಕೆ ಅಭಿಮಾನಿ ತಿಳಿಸಿದ್ದಾನೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ನಿಂಗಪ್ಪ ವಿ ಜಿಗೇರಿ ಎಂಬಾತ ಪೂಜೆ ಮಾಡಿದ್ದು, ಇದೀಗ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ರೈತರ ಬಗ್ಗೆ ಕಾಳಜಿ ಇರುವ ಏಕೈಕ ವ್ಯಕ್ತಿಯೆಂದರೆ ಅದು ಕುಮಾರಸ್ವಾಮಿ ಮಾತ್ರ. ಎಲ್ಲಾ ಪಕ್ಷದವರಿಗೂ ಆಡಳಿತ ನಡೆಸಲು ಒಂದೊಂದು ಬಾರಿ ಅವಕಾಶ ಮಾಡಿಕೊಟ್ಟಿದ್ದೀರಿ. ಹೀಗಾಗಿ 2023ರ ಚುನಾವಣೆಯಲ್ಲಿ ಎಲ್ಲರೂ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದು ಅಭಿಮಾನಿ ನಿಂಗಪ್ಪ ವಿ ಜಿಗೇರಿ ಪೂಜೆ ಮಾಡಿದ್ದಾನೆ.
ಜೆಡಿಎಸ್ ಪಕ್ಷ ಮುಂದಿನ ಬಾರಿ ಅಧಿಕಾರಕ್ಕೆ ಬರಬೇಕು ಅಂತಾ ಪಣ ತೊಟ್ಟಿದ್ದು, ಪದಾಧಿಕಾರಿಗಳಿಗೆ ಪಕ್ಷ ಗಟ್ಟಿಗೊಳಿಸಲು ತಿಳಿಸಲಾಗ್ತಾ ಇದೆ, ಹಾಗೆ ಜೆಡಿಎಸ ನ ಪಂಚರತ್ನ ಯಾತ್ರೆ ನವೆಂಬರ್ 1 ರಂದು ನಡೆಯಬಹುದು , ನಾವು ನಮ್ಮ ಕಾರ್ಯಕ್ರಮ ಜನತೆಗೆ ತಲುಪಬೇಕಾಗಿದೆ. ಈ ವಿಷಯವನ್ನು ಪದಾಧಿಕಾರಿಗಳಿಗೆ ಕಠಿಣವಾಗಿಯೇ ಹೇಳಿದ್ದೇನೆ” ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದರು.