ಹೈದರಾಬಾದ್: ಭಾರತದ ಚೊಚ್ಚಲ ಅಧ್ಯಕ್ಷತೆಯಲ್ಲಿ G20 ಶೃಂಗಸಭೆಗೆ ನವದೆಹಲಿಯಲ್ಲಿ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ ನಡೆಯಲಿದ್ದು, ವಿವಿಧ ರಾಷ್ಟ್ರದ ನಾಯಕರನ್ನು ಬರಮಾಡಿಕೊಳ್ಳಲು ಭರ್ಜರಿ ತಯಾರಿ ನಡೆದಿದೆ.
ಇತ್ತ ತೆಲಂಗಾಣದ ನಿಜಾಮಾಬಾದ್‌ನ ರೈತರೊಬ್ಬರು ತಮ್ಮ ಇಡೀ ತೋಟವನ್ನೇ ಮನಸೂರೆಗೊಳ್ಳುವಂತೆ G20 ಹೆಸರಲ್ಲಿ ಅಂದವಾಗಿ ಅಲಂಕರಿಸಿದ್ದಾರೆ.
ರೈತ ಚಿನ್ನಿ ಕೃಷ್ಣುಡು ಎಂಬುವರು ತಮ್ಮ ಭತ್ತದ ಗದ್ದೆಯಲ್ಲಿ ಜಿ20 ಶೃಂಗಸಭೆಯ ಲೋಗೊ, ಇಂಡಿಯಾ ಶೀರ್ಷಿಕೆ, ಶಿವಲಿಂಗ ಹಾಗೂ ಓಂಕಾರದ ಚಿತ್ರಗಳನ್ನು ಭತ್ತದ ಗದ್ದೆಯಲ್ಲಿ ಸೊಗಸಾಗಿ ಮೂಡಿಸುವ ಮೂಲಕ ಗಮನ ಸೆಳೆದಿದ್ದಾರೆ.


ಚಿನ್ನಿ ಕೃಷ್ಣುಡು ಅವರು ಭಾರತದ ಏಕತೆ ಮತ್ತು ವೈವಿಧ್ಯತೆ ಸಂಕೇತವಾಗಿ ಭತ್ತದ ಗದ್ದೆಗಳನ್ನು ಈ ರೀತಿ ಅಂದಗೊಳಿಸಿದ್ದಾರೆ.


ಗದ್ದೆಯ ಅಲಂಕಾರಕ್ಕಾಗಿ ಪಂಚ ರತ್ನ, ಬಂಗಾರು ಗುಲಾಬಿ, ಕಾಳಬಟ್ಟಿ, ಗೋದಾವರಿ ಉಸಿಕೆ, ಚಿಂತಲೂರು ಸಣ್ಣಲು ಎಂಬ ಐದು ಬಗೆಯ ಭತ್ತದ ತಳಿಯನ್ನು ಬಳಸಿದ್ದಾರೆ.


ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ಶೇರ್ ಮಾಡಿಕೊಂಡಿದ್ದಾರೆ.


ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.