ಚಿಕ್ಕಮಗಳೂರು : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (MESCOM) ಸಿಬ್ಬಂದಿಗಳು ಮಾಡಿರುವ ಎಡವಟ್ಟಿಗೆ ಅಂಗಡಿ ಮಾಲೀಕರೊಬ್ಬರು ಕಂಗಾಲಾಗಿದ್ದಾರೆ.
ಕಡೂರು ಪಟ್ಟಣದ ಮೋಹಿತ್ ಏಜೆನ್ಸಿಗೆ ಪ್ರತಿ ತಿಂಗಳಿಗೆ 4000 ರಿಂದ 4500ರೂ ಬರುತ್ತಿದ್ದ ವಿದ್ಯುತ್ ಬಿಲ್, ಆಗಸ್ಟ್ 1 ರಿಂದ ಸೆಪ್ಟೆಂಬರ್ 1ರ ವರೆಗೆ 10ಲಕ್ಷ ಬಂದಿದೆ. ಬಿಲ್ ಕಂಡು ಅಂಗಡಿ ಮಾಲೀಕ ತಲೆ ಮೇಲೆ ಕೈ ಹೊದ್ದು ಕುಳಿತಿದ್ದಾರೆ.
ಇದನ್ನೂ ಓದಿ : ಬಂದ್‌ಗೆ ಸೆಡ್ಡು ಹೊಡೆದ ಬಿಎಂಟಿಸಿ : ಹೆಚ್ಚುವರಿ ಬಸ್ ರಸ್ತೆಗಿಳಿಸಲು ನಿರ್ಧಾರ
ಈ ಬಗ್ಗೆ ಬಿಲ್ ನೀಡಲು ಬಂದಿದ್ದ ಮೆಸ್ಕಾಂ ಸಿಬ್ಬಂದಿಯನ್ನು ವಿಚಾರಿಸಿದಾಗ, ಸಾಫ್ಟ್‌ವೇರ್ ಸಮಸ್ಯೆಯಿಂದ ಈ ರೀತಿಯಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಕಾರಣ ಹೇಳುತ್ತಾರೆಂದು, ಅಂಗಡಿ ಮಾಲೀಕ ಕಮಲ್ ಚಂದ್ ಡಾಗಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
500 ಬಿಲ್ ಬರುವ ಕಡೆ 15 ಸಾವಿರ ತೋರಿಸುತ್ತಿದೆ. ಅಲ್ಲದೆ ಈ ಕುರಿತು ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳಿಗೆ ನಾಲ್ಕು ದಿನಗಳ ಹಿಂದೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಡಾಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಬಿಲ್ ಶಾಕ್..!
ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿಯಾಗಿ ಗೃಹಜ್ಯೋತಿ ಯೋಜನೆ (200 ಯೂನಿಟ್ ವಿದ್ಯುತ್ ಉಚಿತ) ಜಾರಿಗೊಳಿಸುವ ಮುನ್ನ ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಶಾಕ್ ನೀಡಲಾಗಿತ್ತು.
ಜಾರಿಗೂ ಮುನ್ನ ಕಟ್ಟಿದ್ದಕ್ಕಿಂತ ದುಪ್ಪಟ್ಟು ಹಾಗೂ ಮೂರು ಪಟ್ಟು ವಿದ್ಯುತ್ ಬಿಲ್ ಜೂನ್ ತಿಂಗಳಲ್ಲಿ ನೀಡಲಾಗಿತ್ತು.
ವಿಧಾನಸಭಾ ಚುನಾವಣೆಗೂ ಮೊದಲು ಕರ್ನಾಟಕ ವಿದ್ಯತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ವತಿಯಿಂದ ವಿದ್ಯುತ್ ಬೆಲೆ ಏರಿಕೆ ಮಾಡಿದ್ದರೂ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ನಿಯಂತ್ರಣ ಮಾಡಲು ಮುಂದಾಗಿಲ್ಲ.
ಹೀಗಾಗಿ, ಏಪ್ರಿಲ್ 1 ರಿಂದ ಪೂರ್ವನ್ವಯ ದರದ ಆಧಾರದಲ್ಲಿ ವಿದ್ಯುತ್ ಬಿಲ್‌ನಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿತ್ತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಲಾಖೆಗಳು ನೀಡಿದ ಎಲ್ಲ ಶುಲ್ಕ ಪಾವತಿಸಿದ್ದರೂ ಸಹ ಮತ್ತೆ ಬಿಲ್ ನಲ್ಲಿ ದುಪ್ಪಟ್ಟು ದರ ವಿಧಿಸಲಾಗಿತ್ತು. ಆದರೆ, ಬಹಳಷ್ಟು ಜನರಿಗೆ ಬಿಲ್ ಏರಿಕೆ ಬಗ್ಗೆ ಮಾಹಿತಿಯೇ ಇಲ್ಲದ್ದರಿಂದ ಬಿಲ್‌ನಲ್ಲಿ ಭಾರಿ ದೊಡ್ಡಮಟ್ಟದ ಹಣ ಪಾವತಿಸಬೇಕೆಂದು ಬಿಲ್ ನೀಡಲಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.