Monday, December 4, 2023
spot_img
- Advertisement -spot_img

ನವ ಭವಿಷ್ಯ ಸೃಷ್ಟಿಗೆ ಹೊಸ ಸಂಸತ್ ಭವನದತ್ತ ಹೆಜ್ಜೆ : ಪ್ರಧಾನಿ ಮೋದಿ

ನವದೆಹಲಿ : ‘ಸಂಸತ್ ನ ಸೆಂಟ್ರಲ್ ಹಾಲ್ ನಮ್ಮ ಭಾವನೆಗಳಿಂದ ತುಂಬಿದೆ. ನವ ಭವಿಷ್ಯ ಸೃಷ್ಟಿಗೆ ನಾವು ಹೊಸ ಸಂಸತ್ ಭವನದತ್ತ ಹೆಜ್ಜೆ ಹಾಕುತ್ತಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ವಿದಾಯ ಭಾಷಣ ಮಾಡಿದ ಅವರು, ಕಳೆದ 75 ವರ್ಷಗಳ ಸಂಸತ್ ಭವನದ ನೆನಪುಗಳನ್ನು ಮೆಲುಕು ಹಾಕಿದರು. ಸಂಸತ್ ನಲ್ಲಿ ಸೇವೆ ಸಲ್ಲಿಸಿದ ಪೂರ್ವಿಕ ನಾಯಕರನ್ನು ಸ್ಮರಿಸಿಕೊಂಡರು.

ಸಂಸತ್ ಭವನದಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಣಯಗಳನ್ನು ಸ್ಮರಿಸಿದ ಪ್ರಧಾನಿ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ವಿಧಿ 370 ರದ್ದತಿ ಸೇರಿದಂತೆ ಹಲವು ನಿರ್ಧಾರಗಳನ್ನು ನೆನಪು ಮಾಡಿಕೊಂಡರು. ಭಾರತದ ಚಂದ್ರಯಾನ-3, ಸೂರ್ಯಯಾನಗಳ ಯಶಸ್ಸನ್ನು ಇಡೀ ಜಗತ್ತೇ ಬೆರಗು ಕಣ್ಣಿನಿಂದ ನೋಡುತ್ತಿದೆ ಎಂದು ಪುನರುಚ್ಛರಿಸಿದರು.

ಇದನ್ನೂ ಓದಿ : ಹಳೆಯ ಸಂಸತ್ ಭವನ ಇನ್ಮುಂದೆ ‘ಸಂವಿಧಾನ್ ಸದನ್’: ಪ್ರಧಾನಿ ಮೋದಿ ಘೋಷಣೆ

ತಮ್ಮ ಭಾಷಣದ ನಂತರ, ಪ್ರಧಾನಿ ಮೋದಿ ಮತ್ತು ಎಲ್ಲಾ ಸಂಸದರು ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ನಡೆದುಕೊಂಡು ಹೋದರು. ಹೊಸ ಸಂಸತ್ ಭವನಕ್ಕೆ ಪ್ರವೇಶಿಸುವ ವೇಳೆ ಎಲ್ಲಾ ಸಂಸದರು ಸಂವಿಧಾನದ ಪ್ರತಿ, ಸಂಸತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಒಳಗೊಂಡ ಉಡುಗೊರೆ ಚೀಲವನ್ನು ಸ್ವೀಕರಿಸಿದರು.

ಐದು ದಿನಗಳ ಸಂಸತ್ ನ ವಿಶೇಷ ಅಧಿವೇಶನ ಇಂದಿನಿಂದ ಹೊಸ ಸಂಸತ್ ಭವನ ಸೆಂಟ್ರಲ್ ವಿಸ್ಟಾದಲ್ಲಿ ನಡೆಯಲಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles