ನವದೆಹಲಿ/ಬೆಂಗಳೂರು: ಅರಕಲಗೂಡು ಜೆಡಿಎಸ್ ಶಾಸಕ ಎ. ಟಿ ರಾಮಸ್ವಾಮಿ ಬಿಜೆಪಿಗೆ ಇಂದು ಸೇರ್ಪಡೆ ಆಗಿದ್ದಾರೆ. ಶಾಸಕ ಸ್ಥಾನ ಹಾಗೂ ಜೆಡಿಎಸ್ ಗೆ ರಾಜೀನಾಮೆ ನಿನ್ನೆಯಷ್ಟೇ ಸಲ್ಲಿಸಿದ್ದರು. ಇಂದು ದೆಹಲಿಯಲ್ಲಿ ಪಕ್ಷದ ಕಚೇರಿಯಲ್ಲಿ ಸಚಿವ ಅನುರಾಗ್ ಠಾಕೂರ್ ಹಾಗೂ ಇತರ ಮುಖಂಡರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ನಂತರ ಎ.ಟಿ ರಾಮಸ್ವಾಮಿ ಮಾತನಾಡಿ, ಜನಸೇವೆಗಾಗಿ ತಾವು ಸದಾ ಕೆಲಸ ಮಾಡುತ್ತೇನೆ, ನಾನು ಹಣ ಬಲದ ಮುಂದೆ ಬಲಿಪಶುವಾದೆ, ಭ್ರಷ್ಟಾಚಾರ ಎತ್ತಿ ತೋರಿಸಿದ್ದಕ್ಕೆ ನನ್ನನ್ನು ವಿಕ್ಟಿಮ್ ಮಾಡಲಾಯಿತು. ಈ ಕಾರಣಕ್ಕೆ ಬಿಜೆಪಿಗೆ ಸೇರಿದ್ದೇನೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಜೆ. ಪಿ ನಡ್ಡಾರಿಗೆ ನನ್ನ ಧನ್ಯವಾದಗಳು ಎಂದರು.
ಇದೇ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಎ.ಟಿ ರಾಮಸ್ವಾಮಿ ರೈತ ಪರ ಹೋರಾಟಗಾರರಾಗಿದ್ದು, ಒಕ್ಕಲಿಗ ಮುಖಂಡರಾಗಿದ್ದಾರೆ. ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರಿದ್ದು, ಹೆಚ್ಚಿನ ಶಕ್ತಿ ಬಂದಂತಾಗಿದೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ಮುಂದಿನ ಬಾರಿ ನಮ್ಮ ಗೆಲುವು ಖಚಿತ ಎಂದರು.