Wednesday, May 31, 2023
spot_img
- Advertisement -spot_img

ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ಬೆಂಗಳೂರು: ಆಮ್ ಆದ್ಮಿ ಪಾರ್ಟಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಯಾರು ಯಾವ ಕ್ಷೇತ್ರಕ್ಕೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ, ಕಾಂಗ್ರೆಸ್ ಮಾಜಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯ್ ಸೇರಿದಂತೆ ಹಲವರಿಗೆ ಟಿಕೆಟ್ ನೀಡಲಾಗಿದ್ದು, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಎಎಪಿ ಪಕ್ಷ ಪಟ್ಟಿ ಹಚ್ಚಿಕೊಂಡಿದೆ.

ಯಾರು-ಯಾವ ಕ್ಷೇತ್ರಕ್ಕೆ?
ತೇರದಾಳ – ಅರ್ಜುನ ಹಲಗಿಗೌಡರ
ಬಾದಾಮಿ – ಶಿವರಾಯಪ್ಪ ಜೋಗಿನ
ಬಾಗಲಕೋಟೆ – ರಮೇಶ ಬದ್ನೂರ
ಅಥಣಿ – ಸಂಪತ್ ಕುಮಾರ ಶೆಟ್ಟಿ
ಬೈಲಹೊಂಗಲ – ಬಿ. ಎಂ. ಚಿಕ್ಕನಗೌಡರ
ರಾಮದುರ್ಗ – ಮಲ್ಲಿಕಾರ್ಜುನ ನದಾಫ್​
ಹುಬ್ಬಳ್ಳಿ-ದಾರವಾಡ ಪೂರ್ವ – ಬಸವರಾಜ ಎಸ್‌ ತೇರದಾಳ
ಹುಬ್ಬಳ್ಳಿ-ದಾರವಾಡ ಕೇಂದ್ರ – ವಿಕಾಸ ಸೊಪ್ಪಿನ
ಕಲಘಟಗಿ – ಮಂಜುನಾಥ ಜಕ್ಕಣ್ಣವರ
ರೋಣ – ಆನೇಕಲ್‌ ದೊಡ್ಡಯ್ಯ
ಬ್ಯಾಡಗಿ – ಎಂ. ಎನ್.‌ ನಾಯಕ
ರಾಣೆಬೆನ್ನೂರು – ಹನುಮಂತಪ್ಪ ಕಬ್ಬಾರ
ಬಸವಕಲ್ಯಾಣ – ದೀಪಕ ಮಲಗಾರ
ಹುಮನಾಬಾದ – ಬ್ಯಾಂಕ್‌ ರೆಡ್ಡಿ
ಬೀದರ್​ ದಕ್ಷಿಣ – ನಸೀಮುದ್ದಿನ್‌ ಪಟೇಲ
ಭಾಲ್ಕಿ – ತುಕಾರಾಮ ನಾರಾಯಣರಾವ್ ಹಜಾರೆ
ಔರಾದ – ಬಾಬುರಾವ ಅಡ್ಕೆ
ಕಲಬುರಗಿ ಗ್ರಾಮೀಣ – ಡಾ. ರಾಘವೇಂದ್ರ ಚಿಂಚನಸೂರ
ಕಲಬುರಗಿ ದಕ್ಷಿಣ – ಸಿದ್ದರಾಮ ಅಪ್ಪಾರಾವ ಪಾಟೀಲ
ಕಲಬುರಗಿ ಉತ್ತರ – ಸಯ್ಯದ್‌ ಸಜ್ಜಾದ್‌ ಅಲಿ
ಇಂಡಿ – ಗೋಪಾಲ ಆರ್‌ ಪಾಟೀಲ
ಗಂಗಾವತಿ – ಶರಣಪ್ಪ ಸಜ್ಜಿಹೊಲ
ರಾಯಚೂರು – ಗ್ರಾಮೀಣ ಡಾ. ಸುಭಾಶಚಂದ್ರ ಸಾಂಭಾಜಿ
ರಾಯಚೂರು ನಗರ- ಡಿ. ವೀರೇಶ ಕುಮಾರ ಯಾದವ
ಮಾನ್ವಿ – ರಾಜಾ ಶಾಮಸುಂದರ ನಾಯಕ
ಲಿಂಗಸುಗೂರು – ಶಿವಪುತ್ರ ಗಾಣದಾಳ
ಸಿಂಧನೂರು – ಸಂಗ್ರಾಮ ನಾರಾಯಣ ಕಿಲ್ಲೇದ
ವಿಜಯನಗರ – ಡಿ. ಶಂಕರದಾಸ
ಕೂಡ್ಲಿಗಿ – ಶ್ರೀನಿವಾಸ ಎನ್
ಹರಪನಹಳ್ಳಿ – ನಾಗರಾಜ ಎಚ್‌
ಚಿತ್ರಗುರ್ಗ – ಜಗದೀಶ ಬಿ. ಇ
ಜಗಳೂರು – ಗೋವಿಂದರಾಜು
ಹರಿಹರ – ಗಣೇಶಪ್ಪ ದುರ್ಗದ
ದಾವಣಗೆರೆ ಉತ್ತರ – ಶ್ರೀಧರ ಪಾಟೀಲ
ತುರುವೇಕೆರೆ – ಟೆನ್ನಿಸ್‌ ಕೃಷ್ಣ
ಕುಣಿಗಲ್‌ – ಜಯರಾಮಯ್ಯ
ಗುಬ್ಬಿ – ಪ್ರಭುಸ್ವಾಮಿ
ಶಿರಾ – ಶಶಿಕುಮಾರ್
ಪಾವಗಡ – ರಾಮಾಂಜನಪ್ಪ ಎನ್
ಶೃಂಗೇರಿ – ರಾಜನ್‌ ಗೌಡ ಎಚ್.ಎಸ್‌
ಹಾಸನ – ಅಗಿಲೆ ಯೋಗೀಶ್‌
ಭದ್ರಾವತಿ – ಆನಂದ್
ಶಿವಮೊಗ್ಗ – ನೇತ್ರಾವತಿ ಟಿ
ಸಾಗರ – ಕೆ. ದಿವಾಕರ
ಮೂಡಬಿದ್ರಿ – ವಿಜಯನಾಥ ವಿಠಲ ಶೆಟ್ಟಿ
ಮಂಗಳೂರು ನಗರ ದಕ್ಷಿಣ – ಸಂತೋಷ್‌ ಕಾಮತ
ಸುಳ್ಯ – ಸುಮನಾ
ಕಾರ್ಕಳ – ಡ್ಯಾನಿಯಲ್
ಶಿರಸಿ – ಹಿತೇಂದ್ರ ನಾಯ್ಕ್
ಮಳವಳ್ಳಿ – ಬಿಸಿ ಮಹದೇವಸ್ವಾಮಿ
ಮಂಡ್ಯ – ಬೊಮ್ಮಯ್ಯ
ಪಿರಿಯಾಪಟ್ಟಣ – ರಾಜಶೇಖರ್‌ ದೊಡ್ಡಣ್ಣ
ಚಾಮರಾಜ – ಮಾಲವಿಕಾ ಗುಬ್ಬಿವಾಣಿ
ನರಹಿಂಹರಾಜ – ಧರ್ಮಶ್ರೀ
ಟಿ. ನರಸಿಪುರ – ಸಿದ್ದರಾಜು
ಮಾಗಡಿ – ರವಿಕಿರಣ್‌ ಎಂ.ಎನ್
ರಾಮನಗರ – ನಂಜಪ್ಪ ಕಾಳೇಗೌಡ
ಕನಕಪುರ – ಪುಟ್ಟರಾಜು ಗೌಡ
ಚನ್ನಪಟ್ಟಣ – ಶರತ್ ಚಂದ್ರ
ದೇವನಹಳ್ಳಿ – ಶಿವಪ್ಪ ಬಿ.ಕೆ
ದೊಡ್ಡಬಳ್ಳಾಪುರ – ಪುರುಷೋತ್ತಮ
ನೆಲಮಂಗಲ – ಗಂಗಬೈಲಪ್ಪ ಬಿ.ಎಂ
ಬಾಗೇಪಲ್ಲಿ – ಮಧುಸೀತಪ್ಪ
ಚಿಂತಾಮಣಿ – ಸಿ. ಬೈರೆಡ್ಡಿ
ಕೊಲಾರ – ಆರ್.‌ ಗಗನ ಸುಕನ್ಯ
ಮಾಲೂರು – ರವಿಶಂಕರ್‌ ಎಂ
ದಾಸರಹಳ್ಳಿ – ಕೀರ್ತನ್‌ ಕುಮಾರ
ಮಹಾಲಕ್ಷ್ಮಿ ಲೇಔಟ್-ಶಾಂತಲಾ ದಾಮ್ಲೆ
ಮಲ್ಲೇಶ್ವರಂ – ಸುಮನ್ ಪ್ರಶಾಂತ್‌
ಹೆಬ್ಬಾಳ – ಮಂಜುನಾಥ ನಾಯ್ಡು
ಪುಲಕೇಶಿನಗರ – ಸುರೇಶ್‌ ರಾಥೋಡ್‌
ಸಿ.ವಿ. ರಾಮನ್‌ ನಗರ – ಮೋಹನ ದಾಸರಿ
ಶಿವಾಜಿನಗರ – ಪ್ರಕಾಶ್‌ ನೆಡುಂಗಡಿ
ಶಾಂತಿನಗರ – ಕೆ ಮಥಾಯ್
ರಾಜಾಜಿನಗರ – ಬಿಟಿ ನಾಗಣ್ಣ
ವಿಜಯನಗರ – ಡಾ ರಮೇಶ್‌ ಬೆಲ್ಲಂಕೊಂಡ
ಚಿಕ್ಕಪೇಟೆ – ಬ್ರಿಜೇಶ್‌ ಕಾಳಪ್ಪ
ಪದ್ಮನಾಭನಗರ – ಅಜಯ್‌ ಗೌಡ
ಬಿ.ಟಿ.ಎಂ ಬಡಾವಣೆ – ಶ್ರೀನಿವಾಸ್‌ ರೆಡ್ಡಿ
ಬೊಮ್ಮನಹಳ್ಳಿ – ಸೀತಾರಾಮ್‌ ಗುಂಡಪ್ಪ

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಇಂದು ನಾವು ಬಿಡುಗಡೆ ಮಾಡುತ್ತಿರುವ ಮೊದಲ ಲಿಸ್ಟ್ ಬೆಸ್ಟ್ ಲಿಸ್ಟ್ ಆಗಿದೆ. 10 ವರ್ಷದಲ್ಲಿ ನಮ್ಮ ಪಕ್ಷ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಕಡಿಮೆ ಸಮಯದಲ್ಲಿ ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟರು.

Related Articles

- Advertisement -

Latest Articles