ರಾಮನಗರ: ಮೇಕೆದಾಟು ಯೋಜನೆಯನ್ನು ಕಾಂಗ್ರೆಸ್‌ನವರು ಕೇವಲ ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಂಡಿತೇ ಹೊರತು, ಸರ್ಕಾರ ಬಂದ ನಂತರ ಈ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರದ ಬಳಿ ಹೋರಾಟ ನಡೆಸುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ʼಮುಖ್ಯಮಂತ್ರಿʼ ಚಂದ್ರು ದೂರಿದ್ದಾರೆ.
ಈಗಿನ ಸಂದರ್ಭದಲ್ಲಿ ತಮಿಳುನಾಡಿಗೆ ನೀರನ್ನು ಬಿಟ್ಟರೆ ಬೆಂಗಳೂರಿನ ಒಂದು ಕೋಟಿ 35 ಲಕ್ಷ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಿದ್ದಲ್ಲ.
ಸರ್ಕಾರಗಳು ಅನಗತ್ಯ ಕಾರಣಗಳಿಗೆ ಸುಗ್ರೀವಾಜ್ಞೆ ಹೊರಡಿಸುತ್ತವೆ. ಆದರೆ ಕನ್ನಡಿಗರ ಜ್ವಲಂತ ಕುಡಿಯುವ ನೀರಿನ ಸಮಸ್ಯೆ ಇರುವ ಈ ಸಂದರ್ಭದಲ್ಲಿ ಧೈರ್ಯವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ತಮಿಳುನಾಡಿಗೆ ಧಿಕ್ಕಾರ, ಕಾವೇರಿ ನೀರು ಬಿಡಲು ಆಗಲ್ಲ : ವಾಟಾಳ್ ನಾಗರಾಜ್
ಇದು ಕೇವಲ ಮಂಡ್ಯ ಭಾಗದ ರೈತರ ಹೋರಾಟ ಎಂಬುದನ್ನು ಮರೆತು, ಇದು ಸಮಸ್ತ ಕನ್ನಡಿಗರ, ಬೆಂಗಳೂರಿಗರ ಹೋರಾಟ ಎಂದು ಎಲ್ಲರೂ, ಜೊತೆಗೆ ಸಿನಿಮಾ ಕಲಾವಿದರು ಒಗ್ಗೂಡಿ ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಮುಖ್ಯಮಂತ್ರಿ ಚಂದ್ರು ಅವರು ಕರೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.