ಮಂಗಳೂರು : ತೊಕ್ಕೊಟ್ಟಿನ ಉದ್ದೇಶಿತ ಜಾಗದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಹೆಸರಲ್ಲಿ ಭವನ ನಿರ್ಮಾಣದ ಜೊತೆಗೆ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ವೀರ ರಾಣಿ ಅಬ್ಬಕ್ಕ ಉತ್ಸವದಲ್ಲಿ ಮಾತನಾಡಿ,ರಾಣಿ ಅಬ್ಬಕ್ಕನಂತಹ ವೀರ ವನಿತೆಯರು ಬರೀ ಚರಿತ್ರೆಯಲ್ಲಿ ಅಷ್ಟೇ ಅಲ್ಲ, ಆಕೆಯ ಹೆಸರು ದೇಶದಾದ್ಯಂತ ವ್ಯಾಪಿಸಲು ರಾಜ್ಯ ಮಟ್ಟದ ಅಬ್ಬಕ್ಕ ಉತ್ಸವ ನಡೆಯು ವಂತಾಗಬೇಕು. ತೊಕ್ಕೊಟ್ಟಿನಲ್ಲಿ 5 ಕೋಟಿ ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಿಸಲು ಡಿಪಿಆರ್ ಆಗಿದೆ. ಸ್ವಾತಂತ್ರ್ಯ ಹೋರಾಟಗಾರರ ಸಿನೆಮಾಗಳನ್ನ ನಮ್ಮ ಭವಿಷ್ಯದ ಪೀಳಿಗೆಗೆ ತೋರಿಸಲು ಸುಸಜ್ಜಿತ ಥಿಯೇಟರ್ ನಿರ್ಮಾಣ ಆಗಬೇಕು ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ವೀರರಾಣಿ ಅಬ್ಬಕ್ಕ ಸ್ವಾತಂತ್ರ್ಯ ಹೋರಾಟಗಾರರು ಮಹಿಳೆಯರಿಗೆ ಪ್ರೇರಣ ಶಕ್ತಿಯಾಗಿದ್ದಾರೆ. ಅಷ್ಟೇ ಅಲ್ಲದೇ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ಇಡಲು ಪ್ರಧಾನಿಗೆ ಮತ್ತು ಸಂಬಂಧಿತ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದರು.
ಅಬ್ಬಕ್ಕಳ ಉತ್ಸವ ಕೇವಲ ಉಳ್ಳಾಲಕ್ಕೆ ಸೀಮಿತವಾಗಬಾರದು.ರಾಜ್ಯಮಟ್ಟದ ಉತ್ಸವವಾಗಿ ಸ್ವಾತಂತ್ರ್ಯ ಹೋರಾಟಗಾರರ ಉತ್ಸವ ಆಚರಿಸಲು ರಾಜ್ಯ ಸರ್ಕಾರ ಮುಂದಾಗಬೇಕು, ಇದರೊಂದಿಗೆ ಪಠ್ಯ ಕ್ರಮದಲ್ಲಿ ಸಾಹಸಗಾಥೆ ಅಳವಡಿಸಲು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸ್ತೇನೆ ಎಂದರು.