ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಬಿ.ಕೆ.ಹರಿಪ್ರಸಾದ್ ರನ್ನು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆಯಿದ್ದು, ಬಿ.ಕೆ.ಹರಿಪ್ರಸಾದ್ ಶಕ್ತಿವಂತ, ಆಡಳಿತದಲ್ಲಿ ತಿಳುವಳಿಕೆಯುಳ್ಳವರು. ಹರಿಪ್ರಸಾದ್ ಉಸ್ತುವಾರಿ ಮಂತ್ರಿಯಾದಲ್ಲಿ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊಟ್ಟರೆ ಸಾಮರಸ್ಯದಿಂದ ಬದುಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುಟಿ ಖಾದರ್ ಗೆ ಒಳ್ಳೆಯ ಮಂತ್ರಿ ಸ್ಥಾನ ದೊರಕಬೇಕು. ಆದರೆ ಅವರು ಸೌಮ್ಯ ಸ್ವಭಾವದ ವ್ಯಕ್ತಿ. ಅವರಲ್ಲಿ ಡ್ಯಾಶಿಂಗ್ ಸ್ವಭಾವವಿಲ್ಲ. ಅಲ್ಲದೆ ಖಾದರ್ ಮೇಲೆ ಕೋಮು ಭಾವನೆಯನ್ನು ಹೊರಿಸಿ ಅವರನ್ನು ಸ್ತಬ್ಧ ಮಾಡಲಾಗುತ್ತದೆ. ಆದ್ದರಿಂದ ಬಿ.ಕೆ.ಹರಿಪ್ರಸಾದ್ ಅವರಿಗೆ ದ.ಕ.ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನ ದೊರಕಬೇಕು ಎಂದರು.
ಇನ್ನೂ ಈ ಜಿಲ್ಲೆಯಲ್ಲಿ ಸಚಿವ ಸ್ಥಾನ ಕೊಡುವುದಾದರೆ ಮಿಥುನ್ ರೈಗೆ ಅವಕಾಶ ನೀಡಿ ನಾನು ಕಾಂಗ್ರೆಸ್‌ನಿಂದ ಎಲ್ಲವನ್ನೂ ಅನುಭವಿಸಿದ್ದೇನೆ. ರಮಾನಾಥ್ ರೈಗೂ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಮಿಥುನ್ ರೈ ಯುವ ನಾಯಕ, ಪಕ್ಷ ಯುವಕರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.