Monday, March 20, 2023
spot_img
- Advertisement -spot_img

ಖಾಸಗಿ ಹೋಟೆಲ್‌ ನಲ್ಲಿ ನಡೆದ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ನಿಶ್ಚಿತಾರ್ಥ

ಬೆಂಗಳೂರು : ನಟ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಇಂದು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.
ಫೇಮಸ್‌ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಆಗಿರುವ ಅವಿವಾ ಬಿದ್ದಪ್ಪ ಮತ್ತು ಕುಟುಂಬಸ್ತರು ಕೂಡ ಹೋಟೆಲ್‌ಗೆ ಆಗಮಿಸಿದ್ದಾರೆ. ಸಕಲ ಸಿದ್ಧತೆಗಳು ನಡೆಯುತ್ತಿದ್ದು ನವ ಜೋಡಿ ಫೋಟೋ ಮತ್ತು ವಿಡಿಯೋ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ನಿಶ್ಚಿತಾರ್ಥಕ್ಕೆ ಸಚಿವರಾದ ಅಶ್ವಥ್ ನಾರಾಯಣ್‌ ಕೂಡ ಆಗಮಿಸಿದ್ದಾರೆ. ಈ ವೇಳೆ ಅಭಿಷೇಕ್‌ ತಾಯಿ ಸುಮಲತಾ ಅಂಬರೀಶ್‌, ಅವಿವಾ ಅವರ ತಂದೆ-ತಾಯಿ ಹಾಗೂ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಾಜರಿದ್ದು, ಜೋಡಿಗಳಿಗೆ ಶುಭಹಾರೈಸಿದರು. ಅವಿವಾ ಬಿದ್ದಪ್ಪ ಫ್ಯಾಷನ್‌ ಲೋಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಸ್ವಿಮ್ ಸೂಟ್‌ ಬ್ರ್ಯಾಂಡ್‌ನ ಲಾಂಚ್ ಮಾಡಿದ್ದಾರೆ. ಪೊಲ್ಕಾ ಡಾಟ್ಸ್‌ ಇರುವ ಇಂಡಿಯನ್ ವೇರ್ ಸ್ವಿಮ್‌ ಸೂಟ್‌ ಲಾಂಚ್ ಮಾಡಿದ್ದಾರೆ.

ನಾಲ್ಕು ವರ್ಷಗಳಿಂದ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಪ್ರೀತಿಸುತ್ತಿದ್ದಾರೆ, ತಮ್ಮ ಪ್ರೀತಿ ವಿಚಾರವನ್ನು ಕುಟುಂಬಕ್ಕೆ ತಿಳಿಸಿ ಗ್ರೀನ್ ಸಿಗ್ನಲ್ ಪಡೆದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಜನವರಿ 2023ರ ಸಂಕ್ರಾಂತಿ ಹಬ್ಬದಂದು ಅದ್ಧೂರಿಯಾಗಿ ಮದುವೆ ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

Related Articles

- Advertisement -

Latest Articles