ಬೆಂಗಳೂರು: ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಜಯನಗರದ ಮೇಲೆ ಹಿಡಿತ ಕಳೆದು ಕೊಂಡಿರುವ ಬಿಜೆಪಿ ಈ ಬಾರಿ ಶತಾಯಗತಾಯ ಆ ಕ್ಷೇತ್ರದಲ್ಲಿ ಕಮಲ ಅರಳಿಸುವ ಪಣತೊಟ್ಟಂತಿದೆ. ಆ ನಿಟ್ಟಿನಲ್ಲಿ ಈಗಾಗಲೇ ತೆರೆಮರೆಯ ಸಿದ್ಧತೆ ನಡೆಸಿರುವ ಬಿಜೆಪಿ 2018ರ ಪರಾಜಿತ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ಹಾಗೂ ನಟಿ, ನಿರ್ದೇಶಕಿ, ನಿರ್ಮಾಪಕಿ ಹಾಗೂ ಬರಹಗಾರ್ತಿ ಆಗಿರುವ ರೂಪಾ ಅಯ್ಯರ್ ಹೆಸರನ್ನ ಶಾರ್ಟ್‌ಲಿಸ್ಟ್ ಮಾಡಿದೆ. ಈ ಇಬ್ಬರ ಪೈಕಿ ರೂಪಾ ಅಯ್ಯರ್‌ಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈಗಾಗಲೇ ದೇಶಸೇವೆ, ಸಮಾಜಸೇವೆ, ಕಲಾಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ದೊಟ್ಟಮಟ್ಟದಲ್ಲಿ ಗುರುತಿಸಿಕೊಂಡಿರುವ ರೂಪಾ ಅಯ್ಯರ್, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರನ್ನ ಎದುರಿಸಲು ಸೂಕ್ತ ಅಭ್ಯರ್ಥಿ ಎಂಬ ನಿರ್ಧಾರಕ್ಕೆ ಬಂದಿದ್ದು, ರೂಪಾ ಅಯ್ಯರ್ ಜಯನಗರ ಕ್ಷೇತ್ರದಿಂದ ಕಣಕ್ಕಿಳಿಯೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.


ಯಾರು ಈ ರೂಪಾ ಅಯ್ಯರ್? ಅವರ ಅರ್ಹತೆ ಏನು..!?
ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಎಂಬ ಪುಟ್ಟ ಗ್ರಾಮದಲ್ಲಿ ಮಧ್ಯಮವರ್ಗದ ಕೃಷಿ ಕುಟುಂಬದಲ್ಲಿ ಜನಿಸಿದ ರೂಪಾ ಅಯ್ಯರ್ ಎರಡೆರೆಡು ಸ್ನಾತಕೋತ್ತರ ಪದವಿಗಳನ್ನ ಹೊಂದಿದ್ದಾರೆ. ಲೇಖಕಿಯಾಗಿ ತತ್ವ ಶಾಸ್ತ್ರದ ಅನೇಕ ಪುಸ್ತಕಗಳನ್ನ ಬರೆದಿದ್ದಾರೆ. ಸುಮಾರು 18 ವರ್ಷಗಳಿಂದ 3 ಟ್ರಸ್ಟ್ ಗಳನ್ನು ನಡೆಸುತ್ತಿರುವ ರೂಪಾ ಅಯ್ಯರ್ ಅವುಗಳಿಂದ ಸಮಾಜಮುಖಿ ಕಾರ್ಯಕಗಳನ್ನ ಮಾಡಿಕೊಂಡು ಬಂದಿದ್ದಾರೆ. ನಮ್ಮ ಮನೆ ಟ್ರಸ್ಟ್ ವತಿಯಿಂದ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ (ವಿಶೇಷವಾಗಿ ಹೆಚ್‌ಐವಿ ಸೋಂಕಿತ ಮಕ್ಕಳಿಗೆ) ಇನ್ನು ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನದ ಮೂಲಕ ಮಹಿಳಾ ಕ್ಷೇಮಾಭಿವೃದ್ಧಿ ಮತ್ತು ಮಹಿಳಾ ಸ್ವಾವಲಂಬಿ ಜೀವನಕ್ಕಾಗಿ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಿಕೊಟ್ಟಿದ್ದಾರೆ. ಅಲ್ಲದೇ ಅನೇಕ ಸಾಮಾಜಿಕ ಕಳಕಳಿ ಚಿತ್ರಗಳನ್ನ ಮಾಡಿ, ಟಿವಿ ಸಂವಾದಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಇಡೀ ದೇಶ ರಾಜ್ಯದ ಎಲ್ಲೆಡೆ ಕಾರ್ಯ ನಿರ್ವಹಿಸಿದ್ದಾರೆ.


ವೃತ್ತಿಬದುಕಿಗಾಗಿ ನ್ಯೂಯಾರ್ಕ್‌ಗೆ ತೆರಳಿದ್ದ ಅವರು ಅಲ್ಲಿಂದ ಬಂದ ನಂತರ
- 18 ವರ್ಷಗಳಿಂದ 3 ಟ್ರಸ್ಟ್ ಗಳನ್ನು ನಡೆಸುತ್ತಿದ್ದಾರೆ.
- ಜೈಲು ಖೈದಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಮೂಲಕ ಜೀವನವನ್ನು ಪ್ರೇರೇಪಿಸುತ್ತಿದ್ದಾರೆ.
- 2 ರಾಜ್ಯ ಪ್ರಶಸ್ತಿ ಮತ್ತು 45 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದ್ದಾರೆ.
- ತತ್ವ ಶಾಸ್ತ್ರದ ಪುಸ್ತಕಗಳನ್ನ ಬರೆದು ಯುವಕರನ್ನ ಭಾರತೀಯತೆಯತ್ತಾ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ.
- ಸಮಾಜದ ಜನರನ್ನು ಮಾನಸಿಕವಾಗಿ ಪ್ರಭಲಗೊಳಿಸಲು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸತತ 12 ವರ್ಷ ಕಾಲಂಗಳನ್ನೂ ಬರೆಯುತ್ತಿದಿದ್ದಾರೆ.
- ಹೆಚ್‌ಐವಿ ಪೀಡಿತ ಮಕ್ಕಳು, ಅನಾಥ ಮಕ್ಕಳು ತಮ್ಮ ಹಕ್ಕುಗಳ ಪ್ರಕಾರ ಶಾಲೆಯಲ್ಲಿ ಓದಬೇಕು ಎಂದು 18 ವರ್ಷದಿಂದಲೂ ಹೋರಾಟ ಮಾಡಿದ್ದಾರೆ.
- ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆರ್ಥಿಕತೆಯಲ್ಲಿ ಕೆಳಮಟ್ಟದಲ್ಲಿರುವ ಜನರಿಗೂ ಶ್ರೀಮಂತರುಗೂ ಸೇತುವೆಯಾಗಿ ನಿಂತು ಬಡವರ ಜೀವನೋಪಾಯಕ್ಕೆ ದಾರಿತೋರಿಸಿದ್ದಾರೆ.
- ಸಾಮಾನ್ಯ ರಾಜಕೀಯ ನಾಯಕರಂತೆ ಯೋಚಿಸದೆ ಬರೀ ನನ್ನ ಕ್ಷೇತ್ರದ ಜನ ಮಾತ್ರ ಚೆನ್ನಾಗಿರಬೇಕು, ಅವರಿಗೆ ಮಾತ್ರ ಎಲ್ಲಾ ಯೋಜನೆಗಳೂ ಸಿಗಬೇಕು, ನನಗೆ ವೋಟು ಹಾಕುವವರು ಮಾತ್ರ ಸಂತೋಷವಾಗಿರಬೇಕು ಎಂಬ ಬೇದ ಭಾವ ಮಾಡದೆ ಇಡೀ ರಾಜ್ಯದ ಜನತೆಗೆ ಪ್ರಧಾನ ಮಂತ್ರಿಗಳ ಅನೇಕ ಯೋಜನೆಗಳನ್ನು ಸ್ವತಃ ತಮ್ಮ ಖರ್ಚಿನಿಂದ ತಲುಪಿಸಿದ್ದಾರೆ. ಅನೇಕ ರೈತರೂ ಸಹ ಇದರ ಫಲಾನುಭವಿಗಳು.
- ಕ್ಷೇಮಾಭಿಯಾನ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲೂ ನಡೆಸಿ , ಪ್ರಧಾನ ಮಂತ್ರಿಗಳ ಆಯುಷ್ಮಾನ್ ಆರೋಗ್ಯ ಯೋಜನೆಗಳನ್ನು ನೀಡಿದ್ದಾರೆ.
- ನೋಡಲ್ ಆಫೀಸರ್ ಆಗಿ, 20 ಸಾವಿರ ಜನರಿಗೆ ವ್ಯಾಕ್ಸಿನೇಷನ್ ಕೊಡಿಸಿದ್ದಾರೆ.
- ಈಗ ನೇತಾಜಿ ಸುಭಾಷ್ ಚಂದ್ರಬೋಸ್ ರವರ ಆರ್ಮಿಯ ಬಗ್ಗೆ ಹಿಂದಿ ಸಿನೆಮಾ ಮಾಡಿ ,ಇಡೀ ದೇಶದ ಯುವಕರನ್ನ ದೇಶಾಭಿಮಾನಿಗಳನ್ನಾಗಿ ಮಾಡಿದ್ದಾರೆ
- 2011ರಲ್ಲಿ ಯಂಗ್ ಲೀಡರ್ ಹಾಗೂ ನಾಟ್ಯ ಕಲಾವಿನೇತ್ರಿ ಪ್ರಶಸ್ತಿ , 2010ಲ್ಲಿ ಯುಕೆಯಲ್ಲಿ ಇಂಡಿಯನ್ ಅಚೀವರ್ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಸೇರಿ 2 ರಾಜ್ಯ ಪ್ರಶಸ್ತಿ ಮತ್ತು 45 ಅಂತರಾಷ್ಟ್ರೀಗಳನ್ನ ಪ್ರಶಸ್ತಿ ಪಡೆದಿದ್ದಾರೆ.
ಸದ್ಯ ಬಿಜೆಪಿ ಈ ಎಲ್ಲಾ ಸಾಧನೆ ಮತ್ತು ಅರ್ಹತೆಗಳನ್ನ ಮಾನದಂಡವಾಗಿಟ್ಟುಕೊಂಡು ಜನಾನುರಾಗಿಯಾಗಿ ಕೆಲಸ ಮಾಡಬಲ್ಲ ಅಭ್ಯರ್ಥಿ ಹಾಗೂ ಈಗಾಗಲೇ ಸಮಾಜಸೇವೆಯಲ್ಲಿ ತೊಡಗಿರುವ ಹಿನ್ನೆಲೆ ರೂಪಾ ಅಯ್ಯರ್‌ಗೆ ಮಣೆಹಾಕುವ ಎಲ್ಲಾ ಸಾಧ್ಯತೆ ಇದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

