ಬೆಂಗಳೂರು : ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಸಮಾನ ತಪ್ಪು ಮಾಡಿದ್ದಾರೆ. ಎರಡೂ ಪಕ್ಷಗಳು ಮೀಸಲಾತಿ ಸಮಾನವಾಗಿ ಹಂಚಿಕೆ ಮಾಡಿಲ್ಲ. ಸಿದ್ದರಾಮಯ್ಯ ಅವರ ಉದ್ದೇಶವೇನಿದ್ದರೂ ಬಿಜೆಪಿ ಸೋಲಿಸೋದು ಮಾತ್ರ ಎಂದು ಹೋರಾಟಗಾರ, ನಟ ಚೇತನ್ ಅಹಿಂಸಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೀಸಲಾತಿಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ. ಸಿದ್ದರಾಮಯ್ಯ ಬಡತನ ನಿರ್ಮೂಲನೆ ಮಾಡಲು ಏನೂ ಮಾಡಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಆರ್ಥಿಕ ಮರು ಹಂಚಿಕೆ ಮಾಡುವ ಉದ್ದೇಶ ಇಲ್ಲ. ಕಾಂಗ್ರೆಸ್‌ನ ಉದ್ದೇಶ ಅಧಿಕಾರ ಹಿಡಿಯುವುದು ಮಾತ್ರ ಎಂದು ಕಿಡಿ ಕಾರಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಮನೆ ಸಿಕ್ಕಿಲ್ಲ. ದೇವದಾಸಿ ಪದ್ಧತಿ ಜೀವಂತವಾಗಿದ್ದು, ದೇವದಾಸಿ ತಾಯಂದಿರಿಗೆ ನ್ಯಾಯ ಸಿಕ್ಕಿಲ್ಲ. ಅಲೆಮಾರಿ ಸಮುದಾಯಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಅವರು ಗುಡಿಸಲು ಹಾಕಿಕೊಂಡಿರೋ ಜಾಗದಲ್ಲಿ ಬೀದಿ ದೀಪ ಕೂಡ ಇಲ್ಲ. ಡಿಜಿಟಲ್ ಇಂಡಿಯಾ, ಬುಲೆಟ್ ರೈಲು ಬಗ್ಗೆ ಮಾತನಾಡುವ ಸರ್ಕಾರ ಇವರ ಕಡೆಯೂ ನೋಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ವಿಚಾರದಲ್ಲಿ ಜನಪರ ಕೆಲಸ ಮಾಡಿಲ್ಲ. ಈ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿಯದ್ದು ಮೀಸಲಾತಿ ವಿಚಾರದಲ್ಲಿ ಕೊಡುಗೆ ಶೂನ್ಯವಾಗಿದೆ. ಬಿಜೆಪಿ ಇತ್ತೀಚೆಗೆ ಮೀಸಲಾತಿಯನ್ನು ತಿರುಚಿದೆ, ಕಾಂಗ್ರೆಸ್ ತೆಗೆದುಹಾಕುವ ಹುನ್ನಾರ ಮಾಡಿದೆ, ಎರಡೂ ಪಕ್ಷದವರಿಗೆ ಮೀಸಲಾತಿ ವಿಚಾರವಾಗಿ ಮಾತನಾಡುವ ನೈತಿಕ ಹಕ್ಕಿಲ್ಲ, ಈ ದೇಶದ ಬಹುಜನ ಸಮಾನತಾವಾದಿಗಳು, ಮೂಲಭೂತ ನಿವಾಸಿಗಳು ಮೀಸಲಾತಿ ತಂದಿದ್ದಾರೆ ಎಂದರು.