ನವದೆಹಲಿ : ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರೊಂದಿಗೆ ನಟ ಕಮಲ್ ಹಾಸನ್ ಅವರು ಡಿಸೆಂಬರ್ 24 ರಂದು ಹೆಜ್ಜೆ ಹಾಕಲಿದ್ದಾರೆ.
ಸೆಪ್ಟಂಬರ್ ತಿಂಗಳಿನಲ್ಲಿ ಕನ್ಯಾಕುಮಾರಿಯಿಂದ ಆರಂಭಗೊಂಡು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿ ಎಂಟು ರಾಜ್ಯಗಳಲ್ಲಿ ಸಂಚರಿಸಿದ ಭಾರತ್ ಜೋಡೋ ಯಾತ್ರೆ 100 ದಿನಗಳನ್ನು ಪೂರೈಸಿದೆ.
ಭಾರತ್ ಜೋಡೋ ಯಾತ್ರೆ ಡಿಸೆಂಬರ್ 24 ರಂದು ದೆಹಲಿ ಪ್ರವೇಶಿಸಲಿದ್ದು, ಸುಮಾರು ಎಂಟು ದಿನಗಳ ವಿರಾಮದ ನಂತರ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ, ಹರಿಯಾಣಕ್ಕೆ ತೆರಳಲಿದೆ. ಮುಂದಿನ ತಿಂಗಳು ಪಂಜಾಬ್ ಪ್ರವೇಶಿಸಲಿದ್ದು, ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದೆ. ನಟ, ರಾಜಕಾರಣಿ ಕಮಲ್ ಹಾಸನ್ ಮುಂದಿನ ವಾರ ದೆಹಲಿಯಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೇರಿಕೊಳ್ಳಲಿದ್ದಾರೆ.
ಸೂಪರ್‌ಸ್ಟಾರ್ ಅವರನ್ನು ಯಾತ್ರೆಯಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಆಹ್ವಾನಿಸಿದ್ದಾರೆ ಎಂದುಮೂಲಗಳು ತಿಳಿಸಿವೆ. ಈ ಹಿಂದೆ ಕೂಡಾ ಅನೇಕ ಸಿನೆಮಾ ಗಣ್ಯರು ಭಾಗವಹಿಸಿದ್ದರು.