ಬೆಂಗಳೂರು: ಸ್ಯಾಂಡಲ್‌ವುಡ್‌ನ ಹೆಸರಾಂತ ನಟ ಕಿಚ್ಚ ಸುದೀಪ್ ಬಿಜೆಪಿ ಸೇರಲಿದ್ದಾರೆ. ಕಿಚ್ಚ ಸುದೀಪ್ ಅವರ ಆಪ್ತ ಮೂಲಗಳ ಮಾಹಿತಿ ಪ್ರಕಾರ ನಾಳೆಯೇ ಕಿಚ್ಚ ಸುದೀಪ್ ಬಿಜೆಪಿ ಬಾವುಟ ಹಿಡಿಯಲಿದ್ದಾರೆ ಎನ್ನಲಾಗಿದೆ. ಮೊದಲಿನಿಂದಲೂ ಬಿಜೆಪಿ ನಾಯಕರೊಟ್ಟಿಗೆ ನಿಕಟ ಸಂಪರ್ಕಲ್ಲಿದ್ದ ಸುದೀಪ್ ಅವರು ನಾಳೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಅನ್ನೋ ಮಾಹಿತಿ ಪೊಲಿಟಿಕಲ್360ಗೆ ಲಭ್ಯವಾಗಿದೆ. ಈ ಕುರಿತು ನಾಳೆಯೇ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ಸುದೀಪ್ ಮಾಹಿತಿ ನೀಡಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೆಲ ಸಚಿವರ ಸಲಹೆಯ ಮೇರೆಗೆ ರಾಜಕೀಯಕ್ಕೆ ಎಂಟ್ರಿ ಕೊಡ್ತಿರೋ ಸುದೀಪ್ ಮುಂದಿನ 30 ದಿನಗಳ ಕಾಲ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗಿ ಅಖಾಡಕ್ಕಿಳಿಯಲಿದ್ದಾರೆ. ಕೆಲವೇ ದಿನಗಳಲ್ಲಿ ಪ್ರವಾಸ ಆರಂಭಿಸಲಿದ್ದು, ರಾಜ್ಯದಾದ್ಯಂತ ಸುತ್ತಿ ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ. ಈ ಮಾಹಿತಿ ಪೊಲಿಟಿಕಲ್ 360ಗೆ ಸುದೀಪ್ ಆಪ್ತವಲಯದಿಂದ ಲಭ್ಯವಾಗಿದೆ.