ಬೆಂಗಳೂರು: ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದ ನಟ, ಸಾಮಾಜಿಕ ಹೋರಾಟಗಾರ ಚೇತನ್ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.ಚೇತನ್ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ ಗೃಹ ಇಲಾಖೆ ರದ್ದುಗೊಳಿಸಿದೆ.
ಮಾರ್ಚ್ 28 ರಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಪತ್ರವನ್ನು ಚೇತನ್ ಏಪ್ರಿಲ್ 14 ರಂದು ಸ್ವೀಕರಿಸಿದ್ದಾರೆ. ನಟ ಚೇತನ್ ಪೋಷಕರು ಮೂಲತ: ಭಾರತೀಯರಾಗಿದ್ದರೂ ಚೇತನ್ ಅಮೆರಿಕದಲ್ಲಿ ಜನಿಸಿದ ಅಮೆರಿಕದ ಪೌರತ್ವ ಹೊಂದಿದ್ದಾರೆ.
ಸಾಗರೋತ್ತರ ವೀಸಾದ ಅಡಿ ಭಾರತದಲ್ಲಿ ವಾಸವಾಗಿದ್ದರು. ಏಪ್ರಿಲ್ 14 ರಂದು, ಚೇತನ್ ಅವರು ಮಾರ್ಚ್ 28 ರಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಪತ್ರವನ್ನು ಸ್ವೀಕರಿಸಿದ್ದಾರೆ. ಪತ್ರವನ್ನು ಸ್ವೀಕರಿಸಿದ 15 ದಿನಗಳಲ್ಲಿ ಅವರ OCI ಕಾರ್ಡ್ ನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ.
ನಟ ಚೇತನ್ ಪ್ರತಿಕ್ರಿಯಿಸಿ, ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ನಾನು ಇದೇ ದೇಶದವನು, ನನಗೆ ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ, ವಾಕ್ ಸ್ವಾತಂತ್ರ್ಯ ಕಿತ್ತುಹಾಕುವುದಲ್ಲದೇ,ಜೈಲಿಗೆ ಹಾಕುವುದಲ್ಲದೇ ನನ್ನನ್ನು ದೇಶದಲ್ಲೂ ಇರಬಾರದು ಅಂತ ವೀಸಾ ರದ್ದು ಮಾಡಿದ್ದಾರೆ, ನಾನು ಲಾಯರ್ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ದವಾಗಿ ಸ್ಟೇ ತರುತ್ತೇನೆ, ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಟೈಂ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ಸ್ಟೇ ತರುತ್ತೇನೆ ಎಂದಿದ್ದಾರೆ.