Monday, March 20, 2023
spot_img
- Advertisement -spot_img

ರಮೇಶ್‌ ಜಾರಕಿಹೊಳಿಯವರನ್ನು ಆಸ್ಪತ್ರೆಗೆ ಸೇರಿಸಬೇಕಿದೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ದೇವನಹಳ್ಳಿ: ರಾಜಕೀಯ ದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ ಎಂದು ಬಜೆಟ್ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಸಿರಿಧಾನ್ಯ ಎನ್ನುವ ಹೆಸರಿನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ನಮ್ಮ ರಾಗಿಗೆ ಕನಿಷ್ಟ ಬೆಂಬಲ ಬೆಲೆ ನೀಡುವ ಕುರಿತು ಏನೂ ಹೇಳಿಲ್ಲ. ರಾಜ್ಯಕ್ಕೆ ನೀರಾವರಿ ವಿಭಾಗಕ್ಕೆ ಮೂರು ಸಾವಿರ ಕೋಟಿ ಏನೋ ಕೊಟ್ಟಿದ್ದಾರೆ. ನಾನು ಈಗಷ್ಟೇ ಬರುತ್ತಿದ್ದೇನೆ. ಬಜೆಟ್ ಬಗ್ಗೆ ಅಧ್ಯಯನ ಮಾಡಿ ನಂತರ ಮಾತನಾಡುತ್ತೇನೆ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಬಗ್ಗೆ ಮಾತನಾಡಿ, “ರಮೇಶ್‌ ಜಾರಕಿಹೊಳಿ ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು ಎನ್ನುವುದಿತ್ತು. ಆದರೆ ಪಕ್ಷ ಕೊಡಲಿಲ್ಲ. ಆದಷ್ಟು ಬೇಗ ಅವರನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಬೇಕು. ಎಲೆಕ್ಷನ್ನಲ್ಲಿ ಭೇಟಿ ಮಾಡೋಣ ಎಂದು ಹೇಳಿದ್ದಾರೆ, ಭೇಟಿ ಮಾಡೋಣ” ಎಂದರು.

“ಡಿಕೆಶಿ ವಿದೇಶದಲ್ಲಿ ಮನೆ ಹಾಗೂ ಆಸ್ತಿ ಹೊಂದಿರುವ ಬಗ್ಗೆ ಮಾತನಾಡಿರುವ ಆಡಿಯೋ ನನ್ನಲ್ಲಿದೆ. ಅದನ್ನು ತನಿಖೆಗೆ ಸಿಬಿಐಗೆ ನೀಡುತ್ತೇನೆ ಎಂದಿದ್ದರು. “ಯಾವ ಆಸ್ತಿ, ಯಾವ ಆಡಿಯೋ? ಎಂದು ಈ ಆರೋಪಕ್ಕೆ ಡಿಕೆಶಿ ಪ್ರಶ್ನಿಸಿದ್ದಾರೆ.

Related Articles

- Advertisement -

Latest Articles