Wednesday, November 29, 2023
spot_img
- Advertisement -spot_img

‘ಬೆಂಗಳೂರಿಗೆ ಬಂದು ನೆಲೆಸುವವರು ಸೌಹಾರ್ದತೆಯಿಂದ ಬಾಳ್ಬೇಕು’

ಬೆಂಗಳೂರು : ದೇಶ ವಿದೇಶಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ನೆಲೆಸಿದ್ದರೂ ಕೂಡ ಎಲ್ಲರೂ ಕನ್ನಡಿಗರಾಗಿ ಬಾಳಬೇಕು. ನಾವೆಲ್ಲ ಕನ್ನಡಿಗರಾಗಿ, ಪರಸ್ಪರ ಪ್ರೀತಿ ವಿಶ್ವಾಸಗಳೊಂದಿಗೆ ಸೌಹಾರ್ದತೆಯಿಂದ ಬಾಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ಪ್ರಶಾಂತ್ ಪ್ರಕಾಶ್ ಹಾಗೂ ಮಾಲಿನಿ ಗೋಯಲ್ ಅವರು ಬರೆದಿರುವ Unboxing Bengaluru, The City of New Beginnings (ಅನ್‌ಬಾಕ್ಸಿಂಗ್ ಬೆಂಗಳೂರು, ದ ಸಿಟಿ ಆಫ್‌ ದ ನ್ಯೂ ಬಿಗಿನಿಂಗ್ಸ್) ಪುಸ್ತಕವನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು ಹಬ್ಬದಂತಹ ಆಚರಣೆಗಳ ಮೂಲಕ ನಗರದ ಇತಿಹಾಸ, ಕಲೆ, ಸಂಸ್ಕೃತಿ , ಪರಂಪರೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು.

ಇದನ್ನೂ ಓದಿ : ಚುನಾವಣಾ ಅಖಾಡದಲ್ಲಿ ಅತಿ ಹೆಚ್ಚು ರ‍್ಯಾಲಿ ಆಯೋಜಿಸಿದ ಬಿಜೆಪಿ; ಅಗ್ರಸ್ಥಾನದಲ್ಲಿ ಮೋದಿ ಭಾಷಣ ಸಭೆಗಳು

ಪ್ರಶಾಂತ್ ಪ್ರಕಾಶ್ ಹಾಗೂ ಶ್ರೀಮತಿ ಮಾಲಿನಿ ಗೋಯಲ್ ಅವರು ಬೆಂಗಳೂರು ಹಬ್ಬ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹಬ್ಬಕ್ಕೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಐತಿಹಾಸಿಕ ಮಹತ್ವವಿರುವ ಈ ನಗರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಯೋಜನಾಬದ್ಧವಾಗಿ ಬೆಳೆಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸುಮಾರು ಒಂದೂವರೆ ಕೋಟಿ ಜನರಿದ್ದಾರೆ. ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಕೃತಿ, ಕಲೆ, ಜನಜೀವನ, ನಾಗರೀಕತೆಗಳನ್ನು ಉಳಿಸಿಕೊಂಡು ಬರಲಾಗಿದೆ. ನಗರದಲ್ಲಿ ಬಹಳ ಹಿಂದಿನಿಂದಲೂ ಕಡ್ಲೆಕಾಯಿ ಪರಿಷೆಯಂತಹ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ

ಈ ಜಾತ್ರೆಯಲ್ಲಿ ಬೆಂಗಳೂರಿಗರು ಬಹಳ ಸಂಭ್ರಮದಿಂದ ಭಾಗವಹಿಸುತ್ತಾರೆ. ಅದರಂತೆಯೇ ಆಯೋಜನೆಯಾಗಲಿರುವ ಬೆಂಗಳೂರು ಹಬ್ಬದಲ್ಲಿ, ನಗರದ ಜನರೆಲ್ಲ ಸಂಭ್ರಮದಿಂದ ಭಾಗವಹಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles