ನವದೆಹಲಿ : ಇತರ ಧರ್ಮಗಳು ಆಕ್ರಮಿಸಿಕೊಳ್ಳುವ ಮೊದಲು ಭಾರತ ಚಂದ್ರನ ಮಾಲೀಕತ್ವವನ್ನು ಘೋಷಿಸಬೇಕು. ಚಂದ್ರನನ್ನು ‘ಹಿಂದೂ ರಾಷ್ಟ್ರ’ ಮಾಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಆಗ್ರಹಿಸಿದ್ದಾರೆ.
ಭಾರತದ ಚಂದ್ರಯಾನ-3ರ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಸ್ವಾಮಿ ಚಕ್ರಪಾಣಿ, ಭಾರತ ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ, ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆದ ಜಾಗವನ್ನು ರಾಜಧಾನಿ ಮಾಡಬೇಕು. ಈ ನಿಟ್ಟಿನಲ್ಲಿ ಸಂಸತ್ ನಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಯೋತ್ಪಾದಕರು, ಇಸಾಮಿಸ್ಟ್ ಜಿಹಾದಿಗಳು ಚಂದ್ರನ ಬಳಿಗೆ ತಲುಪುವ ಮೊದಲು ಹಿಂದೂ ಸನಾತನ ರಾಷ್ಟ್ರವೆಂದು ಘೋಷಿಸಬೇಕು. ಚಂದ್ರ ಶಿವನ ತಲೆ ಮೇಲಿದೆ. ಹಿಂದೂ ಧರ್ಮಕ್ಕೂ ಚಂದ್ರನಿಗೂ ಅವಿನಾಭಾವ ಸಂಬಂಧವಿದೆ. ಹಾಗಾಗಿ, ಚಂದ್ರನ ಪಾವಿತ್ರತೆ ಕಾಪಾಡಬೇಕು ಎಂದು ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.
ಸ್ವಾಮಿ ಚಕ್ರಪಾಣಿಯ ಹೇಳಿಕೆಯ ಸುದ್ದಿಯನ್ನು ಹಂಚಿಕೊಂಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್, ‘ಓಕೆ ಹ್ಯಾಪಿ ಜರ್ನಿ, ಚಂದ್ರಯಾನ ಲ್ಯಾಂಡಿಂಗ್ ಬಳಿಕ ಸ್ವಾಮೀಜಿ ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಒತ್ತಾಯಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಸ್ವಾಮಿ ಚಕ್ರಪಾಣಿಯ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ನಗೆಪಾಟಲಿಗೀಡಾಗಿದೆ. ಈ ಹಿಂದೆ ಕೋವಿಡ್ ಸಮಯದಲ್ಲಿ, ‘ನೀವು ಪ್ರಾಣಿಗಳನ್ನು ಕೊಂದು ತಿನ್ನುವುದರಿಂದ ಒಂದು ರೀತಿಯ ಶಕ್ತಿ ಉತ್ಪತಿಯಾಗ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡ್ತಿವೆ’ ಎಂದು ಹೇಳಿದ್ದರು. ಈ ಹೇಳಿಕೆ ಎಲ್ಲೆಡೆ ವೈರಲ್ ಆಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.