ಯಾದಗಿರಿ: ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯವರಿಗೆ ಜನರ ಚಿಂತನೆ ಪ್ರಾರಂಭವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣ ಬಸಪ್ಪ ದರ್ಶಾನಾಪುರ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಜನ ಮೋದಿ ಮುಖ ನೋಡಿ ನಮಗೆ ಓಟ್ ಹಾಕಲ್ಲ ಅನ್ನೋದು ಗೊತ್ತಾಗಿದೆ, ಜನರ ಮನಸ್ಸಿಗೆ ಹತ್ತಿರವಾಗುವಂತಹ ಕಾರ್ಯ ರೂಪಿಸಬೇಕು, ಕಾಂಗ್ರೆಸ್ ಗ್ಯಾರಂಟಿಗಳಂತ ಯೋಜನೆ ರೂಪಿಸಬೇಕು ಅಂತ ಪ್ಲಾನ್ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು
200ರೂಪಾಯಿ ಗ್ಯಾಸ್ ಬೆಲೆ ಕಡಿಮೆ ಮಾಡಿದ್ದು ಏನ್ ದೊಡ್ಡದು ಅಲ್ಲ, 450 ರೂ ಗ್ಯಾಸ್ ಬೆಲೆ ಇತ್ತು, 1150 ರೂ ಮಾಡಿದ್ದಾರೆ, ಕೊರಾನಾ ಬಳಿಕ ಬಹಳಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ, ಸರ್ಕಾರವೇ ಅಂಥವರ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಇದನ್ನೂ ಓದಿ: ʼಕೆಲಸ ಇಲ್ದೇ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಟೀಕಿಸ್ತಿದೆʼ
ಖಾಲಿ ಭಾಷಣದಿಂದ ಜನರಿಗೆ ಹತ್ತಿರವಾಗಲು ಸಾಧ್ಯವಿಲ್ಲ, ಹೀಗಾಗಿ ಜನರಿಗೆ ಉಪಯೋಗವಾಗುವ ಯೋಜನೆ ರೂಪಿಸಲು ಪ್ಲಾನ್ ಮಾಡ್ತಿದ್ದಾರೆ ಎಂದರು. ನಮಗೆ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ, ಈಗ ಅವರ ಮನೆಗೆ ಬೆಂಕಿ ಹೊತ್ತಿದೆ, ಹೀಗಾಗಿ ಸೇಫ್ ಆಗಲು ನೋಡ್ತಿದ್ದಾರೆ, ಯಾರು ಬರ್ತಾರೆ ಅನ್ನೋದರ ಬಗ್ಗೆ ನನಗೆ ಮಾಹಿತಿ ಇಲ್ಲ , ನಾವು ಯಾರ ಮನೆಗೂ ಹೋಗಿ ಕರೀತಿಲ್ಲ, ಯಾರು ಬರೋವ್ರು ಬರಲಿ ಸಮಸ್ಯೆ ಇಲ್ಲ ಎಂದು ಪಕ್ಷ ಸೇರುವವರ ಬಗ್ಗೆ ಪ್ರತಿಕ್ರಿಯಿಸಿದರು.
ಎಸ್.ಟಿ.ಸೋಮಶೇಖರ್ ಮರಳಿ ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಯಾವುದೇ ಪಕ್ಷ ಇರಲಿ ಬಿಬಿಎಂಪಿ ಹಗರಣ ಬಗ್ಗೆ ತನಿಖೆ ಆಗುತ್ತವೆ, ಎಲ್ಲ ಕಾಮಗಾರಿಯೂ ತನಿಖೆ ನಡೆಸುವಂತೆ ಸೂಚಿಸಲಾಗಿದೆ, ಯಾವುದೇ ಒಬ್ಬ ಗುತ್ತಿಗೆದಾರ, ಒಬ್ಬರೇ ಅಂತ ಎಲ್ಲಿಯೂ ಹೇಳಿಲ್ಲ, KKRDBಯಿಂದ ನೂರು ಕೋಟಿ ಹಣ ಕೋರೊನಾ ನಿರ್ವಹಣೆಗೆ ಕೊಡಲಾಗಿದೆ, ನಿನ್ನೆ KKRDB ಸಭೆಯಲ್ಲಿ ಈ ಮಾಹಿತಿ ಗೊತ್ತಾಯಿತು, ಕಾಂಗ್ರೆಸ್ ಗೆ ಬಿಜೆಪಿ ಹಗರಣಗಳೇ ಅಸ್ತ್ರ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದೇ ಬಿಜೆಪಿ ಹಗರಣ ಅಸ್ತ್ರವಾಗಿಟ್ಟುಕೊಂಡು ಕಾಂಗ್ರೆಸ್ ಎಂಪಿ ಚುನಾವಣೆ ಎದುರಿಸಲ್ಲ, ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಚುನಾವಣಾ ಎದುರಿಸುತ್ತೇವೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.