Monday, December 4, 2023
spot_img
- Advertisement -spot_img

ʼವಿಜಯೇಂದ್ರ ಅಧ್ಯಕ್ಷರಾಗಿರೋದ್ರಿಂದ ಕಾಂಗ್ರೆಸ್‌ಗೆ ಯಾವುದೇ ಎಫೆಕ್ಟ್ ಆಗಲ್ಲʼ

ಕೊಪ್ಪಳ : ನೂತನ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ಅಭಿನಂದನೆ ಹೇಳ್ತಿನಿ, ವಿಜಯೇಂದ್ರ ಅಧ್ಯಕ್ಷರಾಗಿರೋದ್ರಿಂದ ಕಾಂಗ್ರೆಸ್‌ಗೆ ಯಾವುದೇ ಎಫೆಕ್ಟ್ ಆಗಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರಿಂದ ಬಿಜೆಪಿಗೆ ಹೆಚ್ಚು ಎಫೆಕ್ಟ್ ಆಗಲಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ಮೇಲೆ ಬಿಜೆಪಿಯಲ್ಲೇ ಅಸಮಾಧಾನ ಎದ್ದಿದೆ. ಅವರ ಪಕ್ಷದವರೇ ಕಾರ್ಯಕ್ರಮಕ್ಕೆ ಹೋಗ್ತಾಯಿಲ್ಲ ಎಂದು ವ್ಯಂಗ್ಯವಾಡಿದರು.

ನಮ್ಮದು ಆಪರೇಶನ್ ಕಮಲ ಅಲ್ಲ, ಅಭಿವೃದ್ಧಿ ಅಷ್ಟೇ

ವಿಜಯೇಂದ್ರರನ್ನ ನೆಮ್ಮದಿಯಿಂದ ಆಳ್ವಿಕೆ ಮಾಡಲು ಅವರ ಪಕ್ಷದವರೇ ಬಿಡಲ್ಲ. ಎಸ್. ಟಿ. ಸೋಮಶೇಖರ್ ಜೊತೆ ಹಲವು ಹಲವು ಜನ ಕಾಂಗ್ರೆಸ್ ಗೆ ಬರ್ತಾರೆ. ಕರ್ನಾಟಕದ ಎಲ್ಲಾ ಭಾಗದಿಂದಲೂ ಬರ್ತಾರೆ. ನಮ್ಮದು ಆಪರೇಶನ್ ಕಮಲ ಅಲ್ಲ, ಅಭಿವೃದ್ಧಿ ಅಷ್ಟೇ. ಯಾರು ಬರ್ತಾರೆ ಅನ್ನೋ ದು ಎಲ್ಲವನ್ನೂ ನಮ್ಮ ಪಕ್ಷದ ಅಧ್ಯಕ್ಷರು ಹೇಳ್ತಾರೆ ಎಂದರು.

ಬಿಜೆಪಿ, ಜೆಡಿಎಸ್ ನಲ್ಲಿ ಎಲ್ಲರೂ ಹತಾಶರಾಗಿದ್ದಾರೆ, ಬಿಜೆಪಿಯವರು ಕಾಂಗ್ರೆಸ್ ನ ಒತ್ತಾಯಕ್ಕೆ ಅಧ್ಯಕ್ಷರನ್ನು ಮಾಡಿದ್ದಾರೆ. ಇದೂವರೆಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಆಗಿಲ್ಲ. ಕಾಂಗ್ರೆಸ್ ಮೇಲೆ ಕುಟುಂಬ ರಾಜಕಾರಣ ಆರೋಪ ಮಾಡೋರು ಈಗ ಬಿಜೆಪಿಯವರು ಅದನ್ನೆ ಮಾಡ್ತಿದ್ದಾರೆ. ಯಡಿಯೂರಪ್ಪ ಹೆಸರು ಹೇಳಿ ರಾಜಕಾರಣ ಮಾಡ್ತಿದ್ದಾರೆ ವಿಜಯೇಂದ್ರ ಹೆಸರು ಹೇಳಿ ಅಲ್ಲ ಎಂದರು.

ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ ವಿದ್ಯುತ್ ಸಂಪರ್ಕ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳ್ಳತನ ಮಾಡಿರೋದು ನಿಜ ಎಂದು ಅವರೇ ಒಪ್ಪಿಕೊಂಡಿದ್ದಾರೆ ದಂಡ ಕಟ್ತಿನಿ ಅಂತ ಹೇಳಿದ್ದಾರೆ.

ಜಗದೀಶ ಶೆಟ್ಟರ್ ಬಿಜೆಪಿ ಸೇರ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಒಬ್ಬ ಹಿರಿಯ ರಾಜಕಾರಣಿ ಅವರು ಅವರಿಗೆ ಗೌರವ ಕೊಡದ ಪಕ್ಷಕ್ಕೆ ಅವರು ವಾಪಸ್ ಯಾವತ್ತಿಗೂ ಹೋಗಲ್ಲ ಎಂದರು.

ಇಂಡಿಯಾ ನ್ಯೂಜಿಲೆಂಡ್ ಸೆಮಿಫೈನಲ್‌ ಮ್ಯಾಚ್ ವಿಚಾರವಾಗಿ ಉತ್ತರಿಸಿದ ಅವರು, ಇವತ್ತಿನ ಪಂದ್ಯದಲ್ಲಿ ಇಂಡಿಯಾ ಗೆದ್ದೇ ಗೆಲ್ಲುತ್ತೆ, ಈ ಪಂದ್ಯ ಅಷ್ಟೇ ಅಲ್ಲದೆ ಫೈನಲ್ ಕೂಡಾ ಗೆದ್ದಾ ವರ್ಲ್ಡ್ ಕಪ್ ನಮ್ಮದಾಗತ್ತೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles