ನವದೆಹಲಿ: ಕೇಂದ್ರ ಸರ್ಕಾರವು ನೂತನ್ ಸಂಸತ್ ಭವನದಲ್ಲಿ ನಾಳೆ ಆಯೋಜಿಸಿರುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ನಾನು ಕಾರಣಾಂತರಗಳಿಂದ ಬರುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಚಂದ್ರ ಮೋಡಿ ಅವರಿಗೆ ಪತ್ರ ಬರೆದಿರುವ ಖರ್ಗೆ, ನಿಮ್ಮ ಆಹ್ವಾನ ನನಗೆ ತಲುಪಿದೆ.
ಆದರೆ, ಪ್ರಸ್ತುತ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಸೆಪ್ಟೆಂಬರ್ 17ರವರೆಗೆ ಈ ಸಭೆ ನಡೆಯಲಿರುವ ಕಾರಣ ನಾನು ದೆಹಲಿಯಲ್ಲಿ ನಾಳೆ ಬೆಳಿಗ್ಗೆ ನಡೆಯುವ ಧ್ವಜಾರೋಹಣಕ್ಕೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 18ರಿಂದ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು, ಹಳೆಯ ಸಂಸತ್ ಭವನದಿಂದ ಹೊಸ ಸಂಸತ್‌ಗೆ ಅಧಿವೇಶನ ವರ್ಗಾವಣೆಗೊಳ್ಳಲಿದೆ. ಇದಕ್ಕೂ ಮುನ್ನ ನಾಳೆ ಧ್ವಜಾರೋಹಣ ನಡೆಯಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.