ಹೈದರಾಬಾದ್ : ದೇಶಕ್ಕೆ ಕಾಂಗ್ರೆಸ್ ಏನು ನೀಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ನಗರದ ಚೇವೆಲ್ಲಾದಲ್ಲಿ ಪ್ರಜಾಗರ್ಜನಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯಗಳ ಏಕೀಕರಣ ಹಾಗೂ ಸ್ವಾತಂತ್ರ್ಯದ ನಂತರ ಸಂವಿಧಾನ ರಚನೆ ಸೇರಿದಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರ ಅಧಿಕಾರದ ಸಮಯದಲ್ಲಿ ಜಾರಿಗೆ ಬಂದ ನೀರಾವರಿ ಯೋಜನೆಗಳೆಲ್ಲ ಈ ದೇಶಕ್ಕೆ ಕಾಂಗ್ರೆಸ್ ನೀಡುರುವ ಕೊಡುಗೆಗಳಾಗಿವೆ ಎಂದರು.
ಬ್ಯಾಂಕ್‌ಗಳ ರಾಷ್ಟ್ರೀಕರಣ ಸೇರಿದಂತೆ ನಮ್ಮ ಹೆಮ್ಮೆಯ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರ ಅಧಿಕಾರಾವಧಿಯ ಸಮಯದಲ್ಲಿನ ಕಂಪ್ಯೂಟರ್‌ಗಳ ಪ್ರಚಾರವು ದೇಶಕ್ಕೆ ನಮ್ಮ ಪಕ್ಷದ ಉಡುಗೊರೆಯಾಗಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ʼಅಭಿವೃದ್ಧಿ ವಿಚಾರವಾದ್ರೆ ಮಾತನಾಡುತ್ತೇನೆ ರಾಜಕೀಯ ಮಾತನಾಡೋಲ್ಲʼ
ಇಲ್ಲಿನ ನಾಯಕರಾದ ಕೆಸಿಆರ್ ಅವರು ಇಂಡಿಯಾ ಒಕ್ಕೂಟದ ಪಕ್ಷಗಳ ಬಗ್ಗೆ ಯಾವತ್ತೂ ಮಾತನಾಡಿಲ್ಲ. ನೀವು ನಿಮ್ಮನ್ನು ಜಾತ್ಯಾತೀತರು ಎಂದು ಕರೆದುಕೊಳ್ಳುತ್ತೀರಿ. ಆದರೆ ನೀವು ಇದ್ದಲಿಂದಲೇ ಬಿಜೆಪಿಗೆ ಜೊತೆಯಾಗುತ್ತೀರಿ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ಕಿಡಿ ಕಾರಿದ್ದಾರೆ.
ಅಲ್ಲದೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಅಂಶಗಳ ಎಸ್‌ಸಿ/ ಎಸ್‌ಟಿಗಳಿಗೆ ಸಂಬಂಧಪಟ್ಟ ಮಹತ್ವದ 12 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರುವ ಘೋಷಣೆಯನ್ನು ಮಾಡಿದರು.
ಅಲ್ಲದೆ ಎಸ್‌ಸಿ ಸಮುದಾಯಗಳಿಗೆ ಶೇ 18 ರಷ್ಟು ಮೀಸಲಾತಿಯನ್ನು ಏರಿಕೆ ಮಾಡಲಾಗುವುದು ಹಾಗೂ ಎಸ್‌ಟಿಗಳಿಗೆ ಶೇ12ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಎರಡೂ ಸಮುದಾಯಗಳ ಕುಟುಂಬಗಳಿಗೂ ₹12 ಲಕ್ಷ ಸಹಾಯಧನ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿದಂತೆ ಸರ್ಕಾರದ ಪ್ರೋತ್ಸಾಹ ಖಾಸಗಿ ಕಂಪನಿಗಳಲ್ಲಿ ಈ ಸಮುದಾಯಗಳ ಉದ್ಯೋಗಿಗಳಿಗೆ ಮೀಸಲಾತಿಯನ್ನು ನೀಡಲಾಗುವುದು ಎಂದು ಖರ್ಗೆ ಭರವಸೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.