ನವದೆಹಲಿ: ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ, ಉತ್ತರ ಪ್ರದೇಶದಲ್ಲಿ ಕಮಾಲ್ ಮಾಡಲು ತಂತ್ರ ರೂಪಿಸಿದೆ. ಇದರ ಅಂಗವಾಗಿ ಪಕ್ಷ ಸಂಘಟನೆಗೆ ವೇಗ ಕೊಡಲು ಮುಂದಾಗಿದ್ದು, ಎಲ್ಲಾ ಘಟಕಗಳಿಗೆ ನೂತನ ಪದಾಧಿಕಾರಿಗಳ ನೇಮಿಸಿದೆ.
ತನ್ನ ಸಾಂಸ್ಕೃತಿಕ ಘಟಕದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದೆ. ಈ ಘಟಕದಲ್ಲಿ ಜಾನಪದ ಗಾಯಕರು, ಸಂಗೀತಗಾರರು ಮತ್ತು ಕವಿಗಳ ಹೊಂದಿರಲಿದೆ ಎಂದು ತಿಳಿದುಬಂದಿದೆ. ಈ ಘಟಕವು ಸಮಾಜವಾದಿ ಪಕ್ಷ ಹಾಗೂ ಅಖಿಲೇಶ್ ಯಾದವ್ ಅವರ ಸಾಧನೆ ಬಿಂಬಿಸಲು ಹಾಡುಗಳ ರಚಿಸುವ ಕಾರ್ಯ ಮಾಡಲಿದೆ. ಎಸ್‌ಪಿಯ ಸಮಾವೇಶ, ಪ್ರಚಾರ ಕಾರ್ಯ ಸೇರಿದಂತೆ ಪಕ್ಷದ ಪ್ರಮುಖ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಈ ಸಮಿತಿ ರಚಿಸಿರುವ ಹಾಡು ಪ್ರಸಾರವಾಗಲಿದೆ.
ಇದನ್ನೂ ಓದಿ: ಆಸಿಯಾನ್ ಶೃಂಗಸಭೆ: ಜಕಾರ್ತಾ ತಲುಪಿದ ಮೋದಿ; ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ
ಅಖಿಲೇಶ್ ಅವರು ವ್ಯಾಸ್ ಜಿ ಗೊಂಡ್ ಅವರನ್ನು ಪಕ್ಷದ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸೆಲ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಪುರನ್ಮಸಿ ದೇಹತಿ ಅವರನ್ನು ಬುಡಕಟ್ಟು ಘಟಕದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಇದಕ್ಕೂ ಮೊದಲು 32 ಸದಸ್ಯರನ್ನೊಳಗೊಂಡ ಎಸ್‌ಟಿ ಕಾರ್ಯಕಾರಿ ಸಮಿತಿಯನ್ನು ರಚಿಸಿತ್ತು. ರಾಜ್ಯದಲ್ಲಿ ಅಲ್ಪಸಂಖ್ಯಾತ ಮತ ಒಗ್ಗೂಡಿಸುವ ನಿಟ್ಟಿನಲ್ಲಿ ಹೊಸ ಸಮಿತಿ ರಚನೆಯಾಗಿದೆ.
ಇದರ ಜೊತೆ ಮುಲಾಯಂ ಸಿಂಗ್ ಯಾದವ್ ಯುವ ಬ್ರಿಗೇಡ್‌ನ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ರಚಿಸಿದೆ, ಇದು ಉತ್ತರ ಪ್ರದೇಶ ಮಾತ್ರ ವಿವಿಧ ರಾಜ್ಯದ ಘಟಕಗಳ ಅಧ್ಯಕ್ಷರ ನೇಮಿಸಲಾಗಿದೆ. 2022ರ ವಿಧಾನಸಭೆ ಚುನಾವಣೆಯ ಹಾಗೂ ಲೋಕಸಭಾ ಉಪಚುನಾವಣೆಯ ಬಳಿಕ ಎಲ್ಲಾ ಘಟಕಗಳನ್ನು ಅಖಿಲೇಶ್ ಯಾದವ್ ವಿಸರ್ಜಿಸಿದ್ದರು.
ಇದನ್ನೂ ಓದಿ: ಉದಯನಿಧಿ ಹೇಳಿಕೆ ತಿರುಚಿದ ಆರೋಪ : ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಮೇಲೆ ಬಿತ್ತು ಕೇಸ್!
ಆದರೆ ಕೆಲ ತಿಂಗಳಿಂದ ಖಾಲಿಯಾಗಿದ್ದ ಘಟಕಗಳಿಗೆ ಮರು ನೇಮಕ ಮಾಡುವ ಕಾರ್ಯ ಭರದಿಂದ ಸಾಗಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷ ಬಲವರ್ಧನೆಗೆ ಎಸ್‌ಪಿ ಮುಂದಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.