ಬೆಂಗಳೂರು: ವಿದ್ಯುತ್ ಕಳ್ಳತನ ಪ್ರಕರಣದ ಸಂಬಂಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಬಗ್ಗೆ ಗರಂ ಆಗಿರುವ ಹೆಚ್ ಡಿ ಕೆ ಬೆಂಬಲಿಗರು ತಮ್ಮ ಫ್ಯಾನ್ಸ್ ಪೇಜ್ ನಲ್ಲಿ ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ಪ್ರತಿ ರಸ್ತೆಗೂ ಕರೆಂಟ್ ಹಾಕಲಾಗಿತ್ತು ಅದು ಎಲ್ಲಿಂದ ಎಂದು ಕಾಂಗ್ರೆಸ್ ಗೆ ಪ್ರಶ್ನಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೆಪಿ ನಗರ ನಿವಾಸಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ವಿದ್ಯುತ್ ಅಲಂಕಾರ ಮಾಡಿದ್ದರು. ಇದಕ್ಕೆ ಕಂಬದಿಂದ ನೇರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಹೀಗೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವುದು ಕಾನೂನು ಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ 2003 ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.


ಇದನ್ನೂ ಓದಿ: ಗೌರಿಶಂಕರ್ ಕಾಂಗ್ರೆಸ್‌ಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ: ಸಚಿವ ಪರಮೇಶ್ವರ್
ಈ ಕುರಿತು ಕಾಂಗ್ರೆಸ್ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಕುಮಾರಸ್ವಾಮಿಯು ಇದಕ್ಕೆ ಪ್ರತಿಕ್ರಿಯೆ ನೀಡಿ, ಬಿಲ್ ಮೊತ್ತವನ್ನು ಪಾವತಿಸುವುದಾಗಿ ಹೇಳಿದ್ದರು. ಆದರೆ ಈಗ ಕುಮಾರಣ್ಣಾ ಫ್ಯಾನ್ಸ್ ಗ್ರೂಪ್ ಕಾಂಗ್ರೆಸ್ ವಿರುದ್ಧ ಸಿಟ್ಟಿಗೆದ್ದಿದ್ದು, ಮೇಕೆದಾಟು ಪಾದಯಾತ್ರೆ ಮಾಡುವಾಗ ಕಾಂಗ್ರೆಸ್ ರಸ್ತೆ ಬದಿಯೆಲ್ಲ ಲೈಟ್ಸ್ ಹಾಕಲಾಗಿತ್ತು. ಕಿಲೋಮೀಟರ್ ಗಟ್ಟಲೆ ಹಾಕಲಾದ ಈ ಲೈಟ್ಸ್ ಜಗಮಗಿಸಿದ್ದವು. ಇದಕ್ಕೆ ಬೇಕಾದ ಕರೆಂಟ್ ಅನ್ನು ಸಿದ್ದರಾಮಯ್ಯ ಮನೆ ಮೀಟರ್ ಬೋರ್ಡ್ ನಿಂದ ಕನೆಕ್ಷನ್ ತೆಗೆದುಕೊಂಡಿದ್ದಾ? ಅಥವಾ ಡಿಕೆ ಶಿವಕುಮಾರ್ ಮನೆ ವಿದ್ಯುತ್ ಬೋರ್ಡ್ ನಿಂದ ಕನೆಕ್ಷನ್ ಕೊಟ್ಟಿದ್ದಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ₹353 ಕೋಟಿ ಭ್ರಷ್ಟಾಚಾರ ಪ್ರಕರಣ: ಲೆಫ್ಟಿನೆಂಟ್ ಗವರ್ನರ್‌ಗೆ 670 ಪುಟಗಳ ವರದಿ ಸಲ್ಲಿಸಿದ ಕೇಜ್ರಿವಾಲ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.