ಬೆಂಗಳೂರು: ವಾಹನಗಳಿಗೆ ಅಳವಡಿಸುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಟೆಂಡರ್‌ನಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಸಾರಿಗೆ ಇಲಾಖೆಯು ಬ್ಲಾಕ್ ಲೀಸ್ಟ್ ರೋಸ್ ಮಾರ್ಟ್ ಕಂಪನಿಗೆ HSRP ನಂಬರ್ ಪ್ಲೇಟ್ ಅಳವಡಿಸೋಕೆ ಟೆಂಡರ್ ಕೊಟ್ಟಿದೆ ಎಂದು ಅಖಿಲ ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ ಆರೋಪ ಮಾಡಿದೆ.
ಸಾರಿಗೆ ಇಲಾಖೆಯ ಈ ನಡೆಯಿಂದಾಗಿ 25 ಸಾವಿರ ಕುಟುಂಬಗಳು ಬೀದಿಗೆ ಬಿದ್ದಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಜಿತೇಂದ್ರ ನಾರಾಯಣ್ ಅಳಲು ತೋಡಿಕೊಂಡಿದ್ದಾರೆ.
ರಾತ್ರೋರಾತ್ರಿ HSRP ನಂಬರ್ ಕಡ್ಡಾಯ ಅಂತ ಆದೇಶ ಹೊರಡಿಸಿದೆ ಹಿಂದಿದ್ಯಾ ಗೋಲ್ಮಾಲ್? ಎಂಬ ಅನುಮಾನ ಮೂಡಿದ್ದು, ಕೇಂದ್ರ ಸರ್ಕಾರದ ಆದೇಶವನ್ನ ಧಿಕ್ಕರಿಸಿ, ಕೆಲವೇ ಕಂಪನಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದೂ ಹೇಳಲಾಗುತ್ತಿದೆ.


ಕೇಂದ್ರ ಸರ್ಕಾರದ ನಿಯಮದ ಪ್ರಕಾರ 23 ಕಂಪನಿಗಳಿಗೆ ಈ ಟೆಂಡರ್‌ನಲ್ಲಿ ಅವಕಾಶ ನೀಡಬೇಕಿತ್ತು. ಆದರೆ, ರಾಜ್ಯ ಸಾರಿಗೆ ಇಲಾಖೆಯು ಕೇವಲ ನಾಲ್ಕು ಕಂಪನಿಗೆ ಮಾತ್ರ ಅನುಮತಿ ನೀಡಿದೆ. ಅದರಲ್ಲೂ ರೋಸ್ ಮಾರ್ಟ್ ಎನ್ನುವ ಕಂಪನಿಗೆ HSRP ನಂಬರ್ ಪ್ಲೇಟ್ ಅಳವಡಿಸುವ ಟೆಂಡರ್‌ನಲ್ಲಿ ಸಿಂಹಪಾಲು ಹೊಂದಿದ್ದು, ನಂಬರ್ ಪ್ಲೇಟ್ ಅನ್ನು ಸರ್ಕಾರ ನಿಗದಿ ಮಾಡಿರುವುದಕ್ಕಿಂತಲೂ ಹೆಚ್ಚಿನ ಹಣಕ್ಕೆ ಪಡೆಯಲಾಗ್ತಿದೆ ಎಂದು ಆರೋಪಿಸಿ ಸಂಘವು ಕೋರ್ಟ್ ಮೆಟ್ಟಿಲೇರಿದೆ.
ಅಖಿಲ ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು, ಮಾರಾಟಗಾರರ ಸಂಘದ ಒತ್ತಾಯವೇನು?
- ಕೇವಲ ನಾಲ್ಕು ಕಂಪನಿ ಅಷ್ಟೇ ಅಲ್ದೆ 23 ಕಂಪನಿಗಳಿಗೂ ಟೆಂಡರ್‌ನಲ್ಲಿ ಅವಕಾಶ ನೀಡಬೇಕು.
- ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು.
ರಾಜ್ಯ ಸರ್ಕಾರವು ಆಗಸ್ಟ್ 17ರಂದು ಅಧಿಸೂಚನೆ ಪ್ರಶ್ನಿಸಿ, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಉತ್ಪಾದಕರ ಸಂಘ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಸೆಪ್ಟೆಂಬರ್ 19ಕ್ಕೆ ನಿಗದಿಪಡಿಸಿದೆ. ಇನ್ನು ಇದರಲ್ಲಿ ಸರ್ಕಾರದ ಅಧಿಸೂಚನೆಯಿಂದ ಪ್ರಭಾವಿ ಕಂಪನಿಗಳಿಗೆ ಮಾತ್ರ ಅನುಕೂಲವೆಂದು ಆರೋಪಿಸಿ, ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ತಡೆ ನೀಡುವಂತೆ ಮನವಿ ಮಾಡಿದೆ.
ಏನಿದು HSRP ನಂಬರ್ ಪ್ಲೇಟ್ ?:
ಈ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಫಲಕಗಳನ್ನು ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಈ ಫಲಕಗಳಲ್ಲಿ ಅಚ್ಚಾಗುವ ನಂಬರ್‌ಗಳು ಉಬ್ಬಿಕೊಂಡಂತೆ ಇರುತ್ತವೆ. ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯೂ ಇರುತ್ತದೆ. ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗುತ್ತದೆ.
ವಿಶೇಷ ವರದಿ: ಉಲ್ಲಾಸ್ ಎಸ್.ಕಿರುವಾಸೆ, ಪೊಲಿಟಿಕಲ್-360