Tuesday, March 28, 2023
spot_img
- Advertisement -spot_img

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನಮ್ಮ ಮೊದಲ ಎದುರಾಳಿ : ಕೇಂದ್ರ ಸಚಿವ ಅಮಿತ್ ಷಾ

ಬೆಂಗಳೂರು : ಹಳೇ ಮೈಸೂರು ಭಾಗದಲ್ಲಿ ಈಗಿರುವ ವ್ಯವಸ್ಥೆ ಸರಿಯಾಗಬೇಕು. ಮುಂದಿನ ಬಾರಿ ಬಂದಾಗ ಎಲ್ಲವೂ ಸರಿ ದಾರಿಯಲ್ಲಿರಬೇಕು ಎಂದು ಸಂಘಟನೆಯ ಯಶಸ್ವಿಗೆ ಒಂದು ತಿಂಗಳ ಡೆಡ್ ಲೈನ್ ನೀಡಿದ್ದಾರೆ. ಅಲ್ಲದೇ ಪಕ್ಷ ಸೇರ್ಪಡೆ ವೇಳೆ ಪರಿಶೀಲಿಸಿ ಸೇರ್ಪಡೆ ಮಾಡಿಕೊಳ್ಳುವಂತೆ ನಾಯಕರುಗಳಿಗೆ ಸಲಹೆ ಕೊಟ್ಟಿದ್ದಾರೆ.

ಹಳೇ ಮೈಸೂರು ಭಾಗದ ಬಿಜೆಪಿ ಮುಖಂಡರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿರುವ ಅಮಿತ್ ಶಾ. ಜಿಲ್ಲಾವಾರು ಕ್ಷೇತ್ರ ಗೆಲ್ಲಲು ಟಾರ್ಗೆಟ್ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಹಾಗೂ ರಾಮನಗರ ಜಿಲ್ಲೆಯಲ್ಲಿ 2 ಕ್ಷೇತ್ರ ಗೆಲುವಿಗೆ ಶ್ರಮಿಸುವಂತೆ ಟಾಸ್ಕ್ ಕೊಟ್ಟಿದ್ದಾರೆ ಅಲ್ಲದೇ ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನಮ್ಮ ಮೊದಲ ಎದುರಾಳಿ. ಕಾಂಗ್ರೆಸ್ ನಮ್ಮ ಎರಡನೇ ಎದುರಾಳಿ. ಜೆಡಿಎಸ್‌ಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಜೊತೆ ಇದ್ದೇವೆ ಎಂದು ಹೇಳಿ JDS ಲಾಭ ಪಡೆಯಬಹುದು. ಈ ಬಗ್ಗೆ ನಿಮ್ಮೆಲ್ಲರಿಗೂ ಸ್ಪಷ್ಟತೆ ಇರಲಿ ಶಾ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಸಂಪರ್ಕ ಇಟ್ಟುಕೊಳ್ಳಲೇಬೇಡಿ.

ಜೆಡಿಎಸ್ ನವರು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ನಮ್ಮ ಕಾರ್ಯಕರ್ತರ ಜೊತೆ ನಿಮ್ಮ ಸಂಬಂಧ ಚೆನ್ನಾಗಿರಲಿ. ಹಳೇ ಮೈಸೂರು ಭಾಗದಲ್ಲಿ 35 ತಲುಪುವ ಕಡೆಗೆ ಗುರಿ ಇರಿಸಿ. ಪಾಸಿಟಿವ್ ಅಲೆ ಇದೆ ಅದನ್ನು ಉಪಯೋಗಿಸಿಕೊಳ್ಳಿ. ಮೊದಲು ನೀವು ಬೂತ್ ಗಳಿಗೆ ತಲುಪಿ ಎಂದು ಸಲಹೆ ಕೊಟ್ಟಿದ್ದಾರೆ.

Related Articles

- Advertisement -

Latest Articles