ಹುಬ್ಬಳ್ಳಿ: ಕೆ.ಎಲ್.ಇ ಸಂಸ್ಥೆ ಬಹಳಷ್ಟು ಸಾಧಕರನ್ನು ನೀಡಿದ ಶಿಕ್ಷಣ ಸಂಸ್ಥೆಯಾಗಿದ್ದು, ದೇಶದಲ್ಲಿ ಇದು ಮಾದರಿ ಸಂಸ್ಥೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಬಿವಿಬಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರುವ ದಿನಗಳಲ್ಲಿ ಮಹಾನ್ ಭಾರತ ನಿರ್ಮಿಸುವ ಗುರಿ ಹೊಂದಿದ್ದು, ನವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ, ವಿಶ್ವಕ್ಕೆ ಭಾರತದ ಸಾಧನೆ ಪರಿಚಯಿಸಿ, ಭಾರತವನ್ನು ನಂಬರ್ ಒನ್ ಮಾಡುವ ಮಹದಾಸೆ ಭಾರತದಾಗಿದೆ ಭಾರತ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ 70,000 ಸ್ಟಾರ್ಟಪ್ ಆರಂಭವಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಂದಿನ 20 ವರ್ಷ ಭಾರತವು ಯುವಕರ ದೇಶವಾಗಿದ್ದು, ಭಾರತ ಜಗತ್ತಿನಲ್ಲಿ ಶ್ರೇಷ್ಠ ದೇಶವಾಗಲಿದೆ. ನಾವು ಎಷ್ಟೇ ದೊಡ್ಡವಾರಾಗಿ ಸಾಧನೆ ಮಾಡಿದರೂ ಕೂಡ ಕಲಿತ ಶಾಲೆ, ಕಲಿಸಿದ ಶಿಕ್ಷಕರು ಹಾಗೂ ಸ್ನೇಹಿತರನ್ನು ಮರೆಯಬಾರದು. ಕರ್ನಾಟಕ ಅತ್ಯಂತ ಪ್ರಗತಿಪರವಾದ ರಾಜ್ಯವಾಗಿದೆ ಎಂದು ವಿವರಿಸಿದರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಅಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ದೂರದ ಊರಿಗೆ ಹೋಗಬೇಕಾಗಿತ್ತು. ಆಗ ಭೂಮರಡ್ಡಿಯವರು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮಾದರಿಯನ್ನಾಗಿಸಿದ್ದಾರೆ. ಅದು ಈಗ ವಿವಿ ಆಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪ ಆಗಿರುವುದು ಹೆಮ್ಮೆಯ ಸಂಗತಿ ಎಂದರು.