Saturday, June 10, 2023
spot_img
- Advertisement -spot_img

ನಮ್ಮದು ನಾಳೆ ಬಾ ಅನ್ನೋ ಪಾರ್ಟಿ ಅಲ್ಲ, ಇವತ್ತು ಬಾ ಅನ್ನೋ ಪಾರ್ಟಿ : ಕಂದಾಯ ಸಚಿವ ಆರ್.ಅಶೋಕ್

ಬಾಗಲಕೋಟೆ : ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ನಮ್ಮ ಸರ್ಕಾರ ಬರುವುದು ಸತ್ಯ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲೇಬೇಕೇಂದು ಅಮಿತ್ ಶಾ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಶ್ರಮಿಸುತ್ತಿದ್ದು, ಬೆಂಗಳೂರಿನಲ್ಲಿ ಮನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ನಮ್ಮದು ನಾಳೆ ಬಾ ಅನ್ನೋ ಪಾರ್ಟಿ ಅಲ್ಲ, ಇವತ್ತು ಬಾ ಅನ್ನೋ ಪಾರ್ಟಿ. ಅಮೀತ್ ಶಾ, ಧರ್ಮೇಂದ್ರ ಪ್ರಧಾನ ಎಲ್ಲರೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಇಲ್ಲಿಗೆ ಬರುತ್ತಾರೆ. ಕಾಂಗ್ರೆಸ್‌ ನವರಂತೆ ಇಲ್ಲಿಗೆ ಬಂದು ಭಾಷಣ ಮಾಡಿ ಓಡಿ ಹೋಗುವುದಲ್ಲ. ಇಲ್ಲಿ ಬರಬೇಕು, ಇಲ್ಲಿ ಇದ್ದುಕೊಂಡು ಡಬಲ್ ಇಂಜಿನ್ ಸರ್ಕಾರ ತರಬೇಕು ಅಂತಾ ಅವರೆಲ್ಲರ ಬಯಕೆಯಾಗಿದೆ ಎಂದರು.

ಬೆಂಗಳೂರಲ್ಲಿ ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಮನೆ ಮಾಡುವುದು ಶೇಕಡಾ ನೂರರಷ್ಟು ಸತ್ಯ. ಇದರಲ್ಲಿ ಅನುಮಾನವೇ ಇಲ್ಲ ಎಂದರು. ಬೆಂಗಳೂರಿನಲ್ಲಿ ಕೆಲಸ ಮಾಡಿದರೆ ಹೆಚ್ಚು ಸ್ಥಾನ ಗೆಲ್ಲುವ ಅವಕಾಶವಿದೆ, ಈ ಹಿಂದೆ ನಡೆದ ಚುನಾವಣೆಯಲ್ಲಿ ನಾವು 18 ಸ್ಥಾನಗಳನ್ನು ಗೆದ್ದಿದ್ದೇವೆ, ಈ ಸಲ ರೆಕಾರ್ಡ್‌ ಬ್ರೇಕ್ ಮಾಡಬಹುದು ಎಂದು ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದರು.

Related Articles

- Advertisement -spot_img

Latest Articles