ಮುಂಬೈ : ‘ಅಮಿತಾಬ್ ಬಚ್ಚನ್ ನನಗೆ ಭಾರತ ರತ್ನ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ರಕ್ಷಾ ಬಂಧನ ಪ್ರಯುಕ್ತ ಬುಧವಾರ ಬಾಲಿವುಡ್ ಬಿಗ್ ಬಿಯನ್ನು ಭೇಟಿಯಾಗಿ ರಾಖಿ ಕಟ್ಟಿದ ಬಳಿಕ ಅವರು ಮಾತನಾಡಿದರು.
ಬಚ್ಚನ್ ಕುಟುಂಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಮತಾ ಬ್ಯಾನರ್ಜಿ, “ನಾನು ಈ ಕುಟುಂಬವನ್ನು ಬಹಳ ಪ್ರೀತಿಸುತ್ತೇನೆ. ಇವರು ಭಾರತದ ನಂಬರ್ ಒನ್ ಕುಟುಂಬ. ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಇದನ್ನೂ ಓದಿ : ಉದ್ಧವ್ ಠಾಕ್ರೆಗೆ ʼರಾಖಿʼ ಕಟ್ಟಿದ ಮಮತಾ ಬ್ಯಾನರ್ಜಿ
ಇಂಡಿಯಾ ಒಕ್ಕೂಟದ ಮೂರನೇ ಸಭೆ ನಿಮಿತ್ತ ಮುಂಬೈನಲ್ಲಿರುವ ಮಮತಾ ಬ್ಯಾನರ್ಜಿ ಬುಧವಾರ ಅಮಿತಾಬ್ ಬಚ್ಚನ್ ಮನೆಗೆ ಭೇಟಿ ನೀಡಿದರು. ಬಿಗ್ ಬಿಗೆ ರಾಖಿ ಕಟ್ಟಿದ ದೀದಿ, ಅವರ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದರು.
ಜುಹು ನಿವಾಸಕ್ಕೆ ಮಮತಾ ಬ್ಯಾನರ್ಜಿ ತಲುಪುತ್ತಿದ್ದಂತೆ ಬಚ್ಚನ್ ಕುಟುಂಬಸ್ಥರು ಆತ್ಮೀಯ ಸ್ವಾಗತ ಕೋರಿದರು. ಈ ವೇಳೆ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್, ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಉಪಸ್ಥಿತರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.