ಬೆಂಗಳೂರು: ಜಾತಿ ವ್ಯವಸ್ಥೆ ನಾಶವಾಗದೆ ಸಮ ಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಕಮಲ ಹಂಪನಾ ಅವರ ಮೂರು ಕೃತಿಗಳ ಲೋಕಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಸಮಯದ ಅಭಾವದಿಂದ ಪುಸ್ತಕ ಓದಲು ಸಾಧ್ಯವಗುತ್ತಿಲ್ಲ. ಹಾಗಾಗಿ ಕೃತಿಗಳ ಬಗ್ಗೆ ನಾನು ಮಾತನಾಡಲ್ಲ, ಬರಗೂರು ರಾಮಚಂದ್ರಪ್ಪ ಈ ಬಗ್ಗೆ ಮಾತನಾಡಿದ್ದಾರೆ ಎಂದರು.
ಹಂಪನಾ ಅವರು ಹೇಳಿದಂತೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳನ್ನ ಈ ಲೇಖನದಲ್ಲಿ ಎಳೆ ಎಳೆಯಾಗಿ ಬರೆದಿದ್ದಾರೆ. ಭಾರತ ಜನಸಂಖ್ಯೆಯಲ್ಲಿ ಚೀನಾಕ್ಕಿಂತ ಮುಂದೆ ಹೋಗಿದೆ. ನಾವೆಲ್ಲ ಮಕ್ಕಳಾಗಿದ್ದಾಗ ಎರಡು ಬೇಕು ಮೂರು ಸಾಕು ಎನ್ನುತ್ತಿದ್ದರು. ಆದ್ರೆ ಈಗ ಒಂದು ಸಾಕು ಅನ್ನೋ ತರ ಆಗಿದೆ. ಈಗ ನಮ್ಮ ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇದೆ ಎಂದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಸುದ್ದಿ; ಶಾಸಕ ಹೆಚ್.ಡಿ. ರೇವಣ್ಣ ಏನಂದ್ರು?
ಸಮಾಜದಲ್ಲಿ ಎಲ್ಲರೂ ವಿದ್ಯಾವಂತರಾಗಬೇಕು. ಸಮಾಜದ ಕೆಡುಕುಗಳು ನಿವಾರಣೆಯಾಗಬೇಕು. ಅದಕ್ಕೆ ಜಾತ್ಯಾತೀತ ರಾಷ್ಟ್ರ ಆಗಬೇಕು ಅಂತ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ನಿಲುವಾಗಿತ್ತು. ನಾವು ಪ್ರಾಣಿಗಳ ಪ್ರೀತಿಸ್ತೀವಿ ಆದ್ರೆ ಮನುಷ್ಯರನ್ನು ದ್ವೇಷ ಮಾಡ್ತೀವಿ. ಸಾಮಾಜಿಕ ಬದಲಾವಣೆಗೆ ಚಲನೆ ಇದ್ರೆ ಮಾತ್ರ ಬದಲಾವಣೆ ಸಾಧ್ಯ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.