ಬೆಂಗಳೂರು : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನವಾಗಿದೆ. ನಂದ್ಯಾಲದಲ್ಲಿ ಮಧ್ಯರಾತ್ರಿ ಸಿಐಡಿ ಪೊಲೀಸರಿಂದ ನಾಯ್ಡು ಅವರನ್ನು ಬಂಧಿಸಲಾಗಿದೆ. . ರೂ. ಸ್ಕಿಲ್ ಡೆವಲಪ್‌ಮೆಂಟ್ ಹಗರಣದಲ್ಲಿ 371ಕೋಟಿ ರೂ. ಅಕ್ರಮವೆಸಗಿದ್ದಾರೆ ಎಂಬ ಆರೋಪ ಅವರ ಮೇಲಿರುವ ಹಿನ್ನೆಲೆ ಬಂಧಿಸಿದ್ದಾರೆ.
2014ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನಿಡುವ ಸಲುವಾಗಿ ಸರ್ಕಾರದಿಂದ ಜರ್ಮನ್ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ನಾಯ್ಡು, ಅವರ ಮೇಲೆ ಕೋಟ್ಯಾಂತರ ರೂ. ಹಣ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ : ಪ್ರತಿಭಟನೆ ವೇಳೆ ಹೆಜ್ಜೇನು ದಾಳಿ; ಬಿಜೆಪಿಗರು ದಿಕ್ಕಾಪಾಲು!
ಇದೆ ಪ್ರಕರಣದಲ್ಲಿ ಈ ಹಿಂದೆ ಹಲವು ಬಾರಿ ವಿಚಾರಣೆಗೆ ಬರುವಂತೆ ಕರೆದಿದ್ದರೂ ಅವರು ಸರಿಯಾಗಿ ಸಹಕರಿಸದೆ ಸಮರ್ಪಕ ಉತ್ತರ ನೀಡಿರಲಿಲ್ಲ. ಈಗ ಹೈಕೋರ್ಟಿನ ಸೂಚನೆಯಂತೆ ಟಿಡಿಪಿಯ ರಾಷ್ಟ್ರೀಯ ಅಧ್ಯಕ್ಷನನ್ನು, ಐಪಿಸಿ ಸೆಕ್ಷನ್ 166, 167, 481, 420, 465, 468, 471, 409, 201 ಆರ್/ಡಬ್ಲ್ಯೂ 109, 34&37ರಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.


58 ಕೋಟಿ ವೆಚ್ಚದ ಯೋಜನೆಯನ್ನು 371ಕೋಟಿ ರೂಗೆ ಹೆಚ್ಚಿಸಿರುವ ಆರೋಪದ ಹಿನ್ನೆಲೆಯಲ್ಲಿ ನಾಯ್ಡು ಜೊತೆಗೆ ಲೋಕೇಶ್ ಎಂಬುವವರನ್ನು ಸಹ ಬಂಧಿಸಿರುವ ಸಿಐಡಿ ಪೊಲೀಸರು ನೇರವಾಗಿ ಅವರನ್ನು ವಿಜಯವಾಡಕ್ಕೆ ಕರೆದುಕೊಂಡು ಹೋಗಲಿದ್ದಾರೆ.
ನನ್ನ ಹಕ್ಕನ್ನು ಕಸಿಯುವ ಕೆಲಸವಾಗಿದೆ..
ಸಿಐಡಿ ಪೊಲೀಸರು ನನಗೆ ಹೇಳದೆ, ಕೇಳದೆ ಯಾವುದೇ ನೋಟಿಸ್ ನೀಡದೆ ನನ್ನನ್ನು ಬಂಧಿಸಿರುವುದು ನನ್ನ ಹಕ್ಕನ್ನು ಕಸಿದುಕೊಳ್ಳುವ ಕೆಲಸವಾಗಿದೆ. ಎಫ್‌ಐಆರ್ ದಾಖಲು ಮಾಡಿಲ್ಲ, ಪ್ರಕರಣದ ತನಿಖಾಧಿಕಾರಿ. ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ಸಿಐಡಿ ಪೊಲೀಸರ ವಿರುದ್ಧ ಬಂಧನದ ವೇಳೆ ಚಂದ್ರಬಾಬು ನಾಯ್ಡು ಕಿಡಿ ಕಾರಿದ್ದಾರೆ.
ಅಲ್ಲದೆ ಅವರ ಬೆಂಬಲಿಗರು ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ವಿರುದ್ಧ ಜಗನ್ ಡೌನ್.. ಡೌನ್..ಪೊಲೀಸ್ ಡೌನ್ ಡೌನ್.. ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಚಂದ್ರಬಾಬು ನಾಯ್ಡು ಬಂಧನವಾಗುತ್ತಿದ್ದಂತೆ ಟಿಡಿಪಿ ಕಾರ್ಯಕರ್ತರು ನಂದ್ಯಾಲದಲ್ಲಿರುವ ಪಕ್ಷದ ಕಚೇರಿಯತ್ತ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.